8ನೇ ತರಗತಿಯ ಬಾಲಕಿಗೆ 24ರ ಯುವಕ ಜತೆ ಮದುವೆ

| Published : Feb 19 2024, 01:33 AM IST / Updated: Feb 19 2024, 11:58 AM IST

ಸಾರಾಂಶ

ತಂದೆ ತಾಯಿಗೆ ತಿಳಿಸದೆ ಅಪ್ರಾಪ್ತೆಗೆ ದೊಡ್ಡಪ್ಪ, ದೊಡ್ಡಮ್ಮ ಮದುವೆ ಮಾಡಿರುವ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಆನೇಕಲ್

ಪೋಷಕರಿಗೆ ತಿಳಿಸದೆ ಸಮೀಪ ಬಂಧುಗಳು 14 ವರ್ಷದ ಅಪ್ರಾಪ್ತೆಗೆ 24ರ ಯುವಕನಿಗೆ ಮದುವೆ ಮಾಡಿಸಿದ ಘಟನೆ ಸರ್ಜಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿನೋದ ಕುಮಾರ್ ಎಂಬಾತನೇ 8ನೆಯ ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತೆಯನ್ನು ಮದುವೆ ಆದ ಗಂಡು. ಹುಡುಗಿಯ ತಂದೆ ಚಿಕಿತ್ಸೆ ಪಡೆಯುತ್ತಿದ್ದು, ಕುಟುಂಬ ಪೋಷಣೆಯನ್ನು ತಾಯಿ ಮಾಡುತ್ತಿದ್ದರು. 

ಅಜ್ಜಿ ಮನೆಯಲ್ಲಿದ್ದು ಓದುತ್ತಿರುವ ಬಾಲಕಿಯ ತಲೆ ಕೆಡಿಸಿದ ದೊಡ್ಡಮ್ಮ ಮತ್ತು ದೊಡ್ಡಪ್ಪ ಇವರನ್ನು ಕೈವಾರಕ್ಕೆ ಕರೆದುಕೊಂಡು ಹೋಗಿ ಮದುವೆ ಮಾಡಿಸಿದ್ದರು.

ವಿನೋದ್ ಕುಮಾರ್ ತಂದೆ ಮುನಿಯಪ್ಪ, ತಾಯಿ ರತ್ನಮ್ಮ, ವಿಜಯ್ ಕುಮಾರ್ ಮತ್ತು ಮುನಿಯಪ್ಪ, ವೆಂಕಟಮ್ಮ ಸೇರಿ ಹಲವರ ಮೇಲೆ ದೂರು ದಾಖಲಾಗಿದೆ.

ವಿಷಯ ತಿಳಿದ ತಾಯಿ ಸರ್ಜಾಪುರ ಠಾಣೆಯಲ್ಲಿ ದೂರು ನೀಡಿದ್ದು, ಕನ್ನಡಪ್ರಭ ಸೋದರ ಸಂಸ್ಥೆ ಏಷ್ಯಾನೆಟ್‌ ಸುವರ್ಣಯಲ್ಲಿ ಪ್ರಸಾರ ಆಗುತ್ತಿದ್ದಂತೆ ಸಿಡಿಪಿಒ ಕವಿತಾ ಧಾವಿಸಿ ಬಂದು ಬಾಲಕಿಯನ್ನು ಹಾಗೂ ಪೋಷಕರನ್ನು ಠಾಣೆಗೆ ಕರೆದೊಯ್ದರು. 

ಬಾಲ್ಯ ವಿವಾಹದ ಕುರಿತು ಜಾಗೃತಿ, ಕಾನೂನೂ, ಹಕ್ಕು, ಪರಿಣಾಮ ಕುರಿತು ಅರಿವು ಮೂಡಿಸಿ ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ಅಧಿಕಾರಿಗಳ ಜೊತೆ ಕಳುಹಿಸಿದರು. 

ಮದುವೆ ಮಾಡಿಸಿದ ಪುರೋಹಿತರು, ಪುಸಲಾತಯಿ ಸಿದವರು, ಮಾಹಿತಿ ಗೋಪ್ಯತೆಯ ಮಾಡಿ ಕಾನೂನು ಉಲ್ಲಂಘನೆ ಮಾಡಿದವರಿಗೆ ₹1 ಲಕ್ಷ ದಂಡ, 10 ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ ಎಂದು ಕವಿತಾ ತಿಳಿಸಿದರು.