ಕೇಂದ್ರ, ಪಶ್ಚಿಮ ಪೊಲೀಸರಿಂದ 439 ರೌಡಿಗಳ ಮನೆ ಶೋಧ; ಚುನಾವಣಾ ಅಕ್ರಮದಲ್ಲಿ ಭಾಗಿ ಆಗದಂತೆ ಎಚ್ಚರಿಕೆ

| Published : Mar 24 2024, 01:30 AM IST

ಕೇಂದ್ರ, ಪಶ್ಚಿಮ ಪೊಲೀಸರಿಂದ 439 ರೌಡಿಗಳ ಮನೆ ಶೋಧ; ಚುನಾವಣಾ ಅಕ್ರಮದಲ್ಲಿ ಭಾಗಿ ಆಗದಂತೆ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಧಾನಿಯ ರೌಡಿಗಳಿಗೆ ಕೇಂದ್ರ ಹಾಗೂ ಪಶ್ಚಿಮ ವಿಭಾಗದ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಆ ಎರಡು ವಿಭಾಗಗಳ ವ್ಯಾಪ್ತಿಯ 439 ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಶನಿವಾರ ಪರಿಶೀಲಿಸಿ ಚುನಾವಣಾ ಅಕ್ರಮಗಳಲ್ಲಿ ತೊಡಗಿದರೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಶ್ಚಿಮ ವಿಭಾಗದ 326 ರೌಡಿಗಳ ಮನೆಗಳಲ್ಲಿ ಶೋಧನಾ ಕಾರ್ಯ ನಡೆಸಲಾಯಿತು. ಈ ದಾಳಿ ವೇಳೆ 231 ರೌಡಿಗಳು ಉಪಸ್ಥಿತರಿದ್ದರು. ಇನ್ನುಳಿದ 95 ರೌಡಿಗಳು ಮನೆಯಲ್ಲಿ ಇರಲಿಲ್ಲ ಎಂದು ಡಿಸಿಪಿ ಎಸ್‌.ಗಿರೀಶ್ ತಿಳಿಸಿದ್ದಾರೆ. ಅದೇ ರೀತಿ ಕೇಂದ್ರ ವಿಭಾಗದಲ್ಲಿ 113 ರೌಡಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ 90 ರೌಡಿಗಳು ಮನೆಯಲ್ಲೇ ಇದ್ದರು. ಇನ್ನುಳಿದವರು ಹೊರಗೆ ತೆರಳಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ರೌಡಿಗಳ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲಿಸಿದ್ದಾರೆ.