ಸಾರಾಂಶ
ತಮಿಳುನಾಡಿನ ಹೊಸೂರಲ್ಲಿ ಪಟಾಕಿ ಗೋಡೌನಿಗೆ ಬೆಂಕಿ
ಅನೇಕಲ್: ರಾಜ್ಯದ ಗಡಿ ತಮಿಳುನಾಡಿನ ಹೊಸೂರು ಸಮೀಪದ ಜೀ ಮಂಗಲದಲ್ಲಿ ಪಟಾಕಿ ದುರಂತ ಸಂಭವಿಸಿದೆ.
ವಡಿವೇಲು ಎಂಬುವವರು ಸುಮಾರು 10 ವರ್ಷಗಳಿಂದ ಇಲ್ಲಿ ಪಟಾಕಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನ ಊಟಕ್ಕೆ ತೆರಳಿದಾಗ ಗೋಡೌನ್‌ನಲ್ಲಿ ಹಠಾತ್ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಅಗ್ನಿಶಾಮಕ ದಳದೊಂಡಿಗೆ ಎಸ್‌ಪಿ ತಂಗದುರೈ ಹಾಗೂ ಸಿಬ್ಬಂದಿ ಧಾವಿಸಿ ಬಂದು ಜನರನ್ನು ಚದುರಿಸಿ ಬೆಂಕಿಗೆ ನೀರನ್ನು ಹರಿಸುವ ಮೂಲಕ ನಂದಿಸಲು ಪ್ರಯತ್ನ ಮಾಡಿದ್ದಾರೆ. ಬೆಂಕಿಯ ಕೆನ್ನಾಲಿಗೆ ಆಗಸ ದೆತ್ತರಕ್ಕೆ ಚಿಮ್ಮಿ ದಟ್ಟವಾದ ಹೊಗೆಯನ್ನು ಚೆಲ್ಲುತ್ತಿತ್ತು.
ಪಟಾಕಿಗಳ ಆರ್ಭಟ ಹೊಗೆ ಇಂದಾಗಿ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಪೊಲೀಸರು ಮತ್ತು ಅಗ್ನಿಶಾಮಕ ದಳದವರ ಸತತ 4 ಗಂಟೆಗಳ ನಿರಂತರ ಪ್ರಯತ್ನ ದಿಂದಾಗಿ ಬೆಂಕಿ ತಹಬಂದಿಗೆ ಬಂದಿತು. ಯಾವುದೇ ಸಾವು ನೋವು ಸಂಭವಿಸಲಿಲ್ಲವಾದರೂ ನಷ್ಟದ ಪ್ರಮಾಣವನ್ನು ಅಂದಾಜಿಸಲಾಗಲಿಲ್ಲ. ಶೆಡ್ ಹಾಗೂ ಪಟಾಕಿ ಒಟ್ಟು ₹1 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ.