ಅಂಗವಿಕಲೆಯನ್ನು ಅಪಹರಿಸಿ ರೇಪ್‌ ಮಾಡಿದ ಗೆಳೆಯ : ಸೆರೆ

| Published : Apr 26 2024, 01:31 AM IST / Updated: Apr 26 2024, 04:58 AM IST

ಸಾರಾಂಶ

ಮದುವೆ ಆಗಲು ಒಪ್ಪದ ಅಂಗವಿಕಲೆಯನ್ನು ಆಕೆಯ ಗೆಳೆಯ ಅಪಹರಿಸಿ, ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯಕ್ಕೆ ಆತನ ನಾಲ್ವರು ಸ್ನೇಹಿತರು ಸಾಥ್‌ ನೀಡಿದ್ದು, ಈಗ ಎಲ್ಲರೂ ಜೈಲು ಸೇರಿದ್ದಾರೆ.

  ಬೆಂಗಳೂರು:  ಮದುವೆಗೆ ನಿರಾಕರಿಸದ ಕಾರಣಕ್ಕೆ ತಮ್ಮ ಪರಿಚಿತ ಅಂಗವಿಕಲ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಸಂತ್ರಸ್ತೆಯ ಗೆಳೆಯ ಸೇರಿದಂತೆ ಐವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಐವರು ಬಂಧಿತರಾಗಿದ್ದು, ಇತ್ತೀಚೆಗೆ ತನ್ನ ಸ್ನೇಹಿತೆಯನ್ನು ಗೆಳೆಯರ ಜತೆ ಸೇರಿ ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ್ವಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಗರದ ಹೋಟೆಲ್‌ನಲ್ಲಿ ಸಂತ್ರಸ್ತೆ ಹಾಗೂ ಆಕೆಯ ಗೆಳೆಯ ಕೆಲಸ ಮಾಡುತ್ತಿದ್ದರು. ಆಗ ಪರಿಚಯವಾಗಿ ಆತ್ಮೀಯತೆ ಬೆಳದಿದೆ. ಆದರೆ ಇತ್ತೀಚೆಗೆ ತನಗೆ ಸರ್ಕಾರಿ ನೌಕರಿ ಸಿಕ್ಕಿದ ಬಳಿಕ ಗೆಳೆಯನಿಂದ ದೂರವಾಗಲು ಸಂತ್ರಸ್ತೆ ಯತ್ನಿಸಿದ್ದಳು. ಇದರಿಂದ ಆರೋಪಿ ಬೇಸರಗೊಂಡಿದ್ದ. ಆಗ ಮದುವೆ ಆಗುವಂತೆ ಗೆಳೆಯನ ಪ್ರಸ್ತಾಪಕ್ಕೆ ಆಕೆ ತಿರಸ್ಕಸಿದ್ದಳು. ಕೊನೆಗೆ ಗೆಳೆತಿಯನ್ನು ಏ.20 ರಂದು ಅಪಹರಿಸಿ ಆತ ಲೈಂಗಿಕವಾಗಿ ಶೋಷಿಸಿದ್ದಾನೆ. ಈ ಕೃತ್ಯಕ್ಕೆ ಆತನ ನಾಲ್ವರು ಸ್ನೇಹಿತರು ಕೂಡ ಸಾಥ್ ಕೊಟ್ಟಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.