ಪ್ರೇಮಿಯ ಜತೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ

| Published : Jul 15 2024, 10:02 AM IST

SUICIDE
ಪ್ರೇಮಿಯ ಜತೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ
Share this Article
  • FB
  • TW
  • Linkdin
  • Email

ಸಾರಾಂಶ

ವಿವಾಹಿತ ಯುವತಿ ತನ್ನ ಮಾಜಿ ಪ್ರಿಯಕರನನ್ನು ತಬ್ಬಿಕೊಂಡು ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಎಂ.ಮುದ್ದಲಹಳ್ಳಿಯಲ್ಲಿ ಶನಿವಾರ ನಡೆದಿದೆ.

ಚಿಂತಾಮಣಿ :  ವಿವಾಹಿತ ಯುವತಿ ತನ್ನ ಮಾಜಿ ಪ್ರಿಯಕರನನ್ನು ತಬ್ಬಿಕೊಂಡು ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಎಂ.ಮುದ್ದಲಹಳ್ಳಿಯಲ್ಲಿ ಶನಿವಾರ ನಡೆದಿದೆ.

ತಾಲೂಕಿನ ಕಾಚಹಳ್ಳಿಯ ವಿವಾಹಿತೆ ಅನುಷಾ (19) ಹಾಗೂ ಎಂ.ಮುದ್ದಲಹಳ್ಳಿ ಗ್ರಾಮದ ವೇಣು (21) ಆತ್ಮಹತ್ಯೆಗೆ ಶರಣಾಗಿದ್ದು ಈ ಇಬ್ಬರೂ ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ. ಆದರೆ ಇವರಿಬ್ಬರು ಬೇರೆ ಬೇರೆ ಜಾತಿಗೆ ಸೇರಿದ ಕಾರಣ ಮದುವೆಗೆ ಮನೆಯರು ಒಪ್ಪಿರಲಿಲ್ಲ.

ಬಳಿಕ ಅನುಷಾಳನ್ನು ಆಕೆಯ ಪೋಷಕರು ತಾಲೂಕಿನ ಕಾಚಹಳ್ಳಿಯ ಚೌಡರೆಡ್ಡಿ ಎಂಬ ಯುವಕನೊಂದಿಗೆ ಕಳೆದ ಮೇ ೨೬ ರಂದು ಮದುವೆ ಮಾಡಿದ್ದರು. ನೂತನ ದಂಪತಿ ದಾಬಸ್‌ಪೇಟೆಯಲ್ಲಿ ಸಂಸಾರ ನಡೆಸುತ್ತಿದ್ದರು. ಆಷಾಡ ಮಾಸದ ಸಲುವಾಗಿ ಅನುಷಾ ತವರೂರಿಗೆ ಬಂದಿದ್ದಳು.

ಆದರೆ ಮದುವೆಯಾದ ನಂತರವೂ ಪ್ರೇಮಿಗಳಿಬ್ಬರೂ ಮೊಬೈಲ್ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು. ಮುಂದೆ ತಾವಿಬ್ಬರೂ ಒಂದಾಗಿ ಬದುಕಲು ಸಾಧ್ಯವಿಲ್ಲವೆಂದು ಆತ್ಮಹತ್ಯೆಗೆ ನಿರ್ಧರಿಸಿ ಕೃಷಿಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾರ್ವಜನಿಕರು ಕೃಷಿ ಹೊಂಡದ ಮಾಲೀಕ ಚಲಪತಿ ಮೊಬೈಲ್, ಚಪ್ಪಲಿ ಮತ್ತು ಪರ್ಸ್‌ ಕಂಡು ಕೆಂಚಾರ್ಲಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೃಷಿ ಹೊಂಡದಿಂದ ಇಬ್ಬರ ಶವಗಳನ್ನು ಹೊರತೆಗೆದಿದ್ದಾರೆ.

ಪೊಲೀಸರು ಅನುಷಾ ಗಂಡ ಚೌಡರೆಡ್ಡಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ರಾತ್ರಿ ಎರಡು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.