ರೆಸಾರ್ಟಲ್ಲಿ ಜಿಪ್‌ಲೈನ್‌ ಆಡುವಾಗ ಕೇಬಲ್‌ ತುಂಡಾಗಿ ಮಹಿಳೆ ಸಾವು

| Published : May 20 2024, 01:42 AM IST / Updated: May 20 2024, 04:54 AM IST

death
ರೆಸಾರ್ಟಲ್ಲಿ ಜಿಪ್‌ಲೈನ್‌ ಆಡುವಾಗ ಕೇಬಲ್‌ ತುಂಡಾಗಿ ಮಹಿಳೆ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ರೆಸಾರ್ಟ್‌ನಲ್ಲಿ ಜಿಪ್‌ಲೈನ್‌ ಆಡುವ ವೇಳೆ ಕೇಬಲ್‌ ವೈಯರ್‌ ತಂಡಾಗಿ ಬಿದ್ದು ಮಹಿಳೆ ಸಾವನ್ನಪ್ಪಿರುವುದು.

ರಾಮನಗರ: ಜಿಪ್ ಲೈನ್ ಆಡಲು ಹೋಗಿ ಮಹಿಳೆ ಸಾವನ್ನಪ್ಪಿ, ವ್ಯಕ್ತಿಯೊಬ್ಬ ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಬೆಟ್ಟಹಳ್ಳಿ ಬಳಿಯ ಜಂಗಲ್ ಟ್ರೈಯಲ್ಸ್ ಎ ರೆಸಾರ್ಟ್‌ನಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆ ನಿವಾಸಿ ರಂಜಿನಿ (35) ಮೃತರು. ಗಾಯಾಳು ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರಜಾ ದಿನ ಕಳೆಯಲು ರಂಜಿನಿ 18 ಮಂದಿಯೊಂದಿಗೆ ಜಂಗಲ್ ಟ್ರೈಯಲ್ಸ್ ಎ ರೆಸಾರ್ಟ್‌ಗೆ ಆಗಮಿಸಿದ್ದರು. ಜಿಪ್ ಲೈನ್ ಆಡುವಾಗ ಕೇಬಲ್ ತುಂಡಾಗಿದ್ದರಿಂದ ಮಹಿಳೆ ಕೆಳಕ್ಕೆ ಬಿದ್ದು ಸಾವನ್ನಪ್ಪಿದರೆ, ಜೊತೆಯಲ್ಲಿದ್ದ ವ್ಯಕ್ತಿ ಗಾಯಗೊಂಡಿದ್ದಾನೆ. 

ರೆಸಾರ್ಟ್ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ ಎಂದು ರಂಜಿನಿ ಸಂಬಂಧಿಕರು ಆರೋಪಿಸಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾರೋಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.