ಎರಡು ಬೈಕ್‌ಗಳ ನಡುವೆ ಅಪಘಾತ: ಮೂವರಿಗೆ ಗಂಭೀರ ಗಾಯ

| Published : Jan 10 2025, 12:49 AM IST

ಸಾರಾಂಶ

ಎರಡು ಬೈಕ್‌ಗಳ ನಡುವೆ ರಸ್ತೆ ಅಪಘಾತ ಸಂಭವಿಸಿ ನೆಲಕ್ಕುರುಳಿ ಬೈಕ್ ಸವಾರನ ತಲೆ ಮೇಲೆ ಪಕ್ಕದಲ್ಲೇ ಚಲಿಸುತ್ತಿದ್ದ ಜೆಸಿಬಿ ಸಣ್ಣ ಪ್ರಮಾಣದಲ್ಲಿ ಹರಿದಿರುವ ಘಟನೆ ತಾಲೂಕಿನ ಅರಕೆರೆ ಗ್ರಾಮದಲ್ಲಿ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಎರಡು ಬೈಕ್‌ಗಳ ನಡುವೆ ರಸ್ತೆ ಅಪಘಾತ ಸಂಭವಿಸಿ ನೆಲಕ್ಕುರುಳಿ ಬೈಕ್ ಸವಾರನ ತಲೆ ಮೇಲೆ ಪಕ್ಕದಲ್ಲೇ ಚಲಿಸುತ್ತಿದ್ದ ಜೆಸಿಬಿ ಸಣ್ಣ ಪ್ರಮಾಣದಲ್ಲಿ ಹರಿದಿರುವ ಘಟನೆ ತಾಲೂಕಿನ ಅರಕೆರೆ ಗ್ರಾಮದಲ್ಲಿ ಸಂಭವಿಸಿದೆ.

ಘಟನೆಯಲ್ಲಿ ತಾಲೂಕಿನ ತಡಗವಾಡಿ ಗ್ರಾಮದ ದೇವೇಗೌಡ, ಸರೋಜ ಹಾಗೂ ಗುಡ್ಡಪ್ಪ ಎಂಬ ಮೂವರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಲಾಗಿದೆ.

ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಜೆಸಿಬಿ ವಾಹನವನ್ನು ಹಿಂದಿಕ್ಕುವ ವೇಳೆ ಎದುರುಗಡೆ ಬಂದ ಬೈಕ್ ಡಿಕ್ಕಿ ಹೊಡೆದಿದೆ. ರಸ್ತೆಯಲ್ಲಿ ತಿರುವಿದ್ದರಿಂದ ಎದುರುಗಡೆಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿ ನೆಲಕ್ಕುರುಳಿದಾಗ ದೇವೇಗೌಡನ ತಲೆ ಮೇಲೆ ಸಣ್ಣ ಪ್ರಮಾಣದಲ್ಲಿ ಜೆಸಿಬಿ ಹರಿದಿರುವ ವೀಡಿಯೋ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

ಘಟನೆ ನಂತರ ಅರಕೆರೆ ಠಾಣಾ ಪೋಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪ್ರಾಪ್ತೆ ಅಪಹರಣ: ಪ್ರಕರಣ ದಾಖಲು

ಶ್ರೀರಂಗಪಟ್ಟಣ:

ಅಪ್ರಾಪ್ತೆ ಅಪಹರಣ ಸಂಬಂಧ ಯುವಕನ ವಿರುದ್ಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ತಾಲೂಕಿನ ಕೆಆರ್‌ಎಸ್ ಗ್ರಾಮದ ಯೋಗೇಶ್ ಎಂಬ ಯುವಕ ಕಳೆದ 4 ದಿನಗಳ ಹಿಂದೆ ಅದೇ ಗ್ರಾಮದ ಅಪ್ರಾಪ್ತೆಯನ್ನು ಅಪಹರಿಸಿರುವುದಾಗಿ ಬಾಲಕಿ ತಾಯಿ ಪೊಲೀಸರಿಗೆ ನೀಡಿದ್ದರು. ಪ್ರಕರಣ ಕೈಗೆತ್ತುಕೊಂಡ ಪೊಲೀಸರು, ಬುಧವಾರ ಸಂಜೆ ಚನ್ನರಾಯಪಟ್ಟಣ ಬಳಿ ಬಾಲಕಿಯನ್ನು ರಕ್ಷಣೆ ಮಾಡಿದ್ದರು. ನಂತರ ಗುರುವಾರ ಬೆಳಗ್ಗೆ ಚಿನಕುರಳಿ ಬಳಿ ಯುವಕನ್ನು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಜೂಜು ಅಡ್ಡೆ ಮೇಲೆ ದಾಳಿ: 17 ಮಂದಿ ಬಂಧನ

ಶ್ರೀರಂಗಪಟ್ಟಣ:

ಅಕ್ರಮ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 17 ಮಂದಿ ಜೂಜು ಕೋರರನ್ನು ಬಂಧಿಸಿ ಪಣಕ್ಕಿಟ್ಟಿದ್ದ ಹಣವನ್ನು ಜಪ್ತಿ ಮಾಡಿರುವ ಘಟನೆ ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಅನಗನಹಳ್ಳಿ ಫಾರ್‍ಮುಲ-1 ರೆಷಿಡೆನ್ಸಿಯಲ್ ಲಾಡ್ಜ್ ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಜೂಜು ಅಡ್ಡೆಯಲ್ಲಿ ಪಣಕ್ಕಿಟ್ಟಿದ್ದ 1 ಲಕ್ಷದ 50 ಸಾವಿರದ 40 ರು ನಗದು ವಶಪಡಿಸಿಕೊಂಡು, ಜೂಜಿನಲ್ಲಿ ತೊಡಗಿದ್ದ 17 ಮಂದಿಯನ್ನು ಬಂಧಿಸಿ ನಂತರ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.