ಮತದಾನ ಮಾಡಿದ ಕೆಲವೇ ಗಂಟೆಗಳಲ್ಲಿ ವೃದ್ಧ ಸಾವು

| Published : Apr 27 2024, 01:16 AM IST / Updated: Apr 27 2024, 04:41 AM IST

ಸಾರಾಂಶ

ಮದ್ದೂರಿನ ಚೆನ್ನೆಗೌಡನ ದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 92ರಲ್ಲಿ 95 ವರ್ಷದ ಕುಂದುರಯ್ಯ ತಮ್ಮ ಮಕ್ಕಳ ಸಹಾಯದಿಂದ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಬಳಿಕ ಕೊನೆಯುಸಿರಳೆದಿದ್ದಾನೆ.

 ಮದ್ದೂರು :  ಮತದಾನ ಮಾಡಿದ ಕೆಲವೇ ಗಂಟೆಗಳಲ್ಲಿ ವೃದ್ಧನೋರ್ವ ಮೃತಪಟ್ಟಿರುವ ಘಟನೆ ಪಟ್ಟಣದ ಚನ್ನೇಗೌಡನ ದೊಡ್ಡಿಯಲ್ಲಿ ಶುಕ್ರವಾರ ಜರುಗಿದೆ.

ಚನ್ನೇಗೌಡನದೊಡ್ಡಿಯ ಕುಂದೂರಯ್ಯ 95 ಮತದಾನ ಮಾಡಿದ ಕೆಲವೇ ಗಂಟೆಗಳಲ್ಲಿ ಕೊನೆಯುಸಿರಳೆದಿದ್ದಾನೆ. ಕುಂದೂರಯ್ಯ ಬೆಳಗ್ಗೆ 8 ಗಂಟೆ ಸುಮಾರಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ 92 ರಲ್ಲಿ ತಮ್ಮ ಮಗನ ಹಾಗೂ ಗ್ರಾಮಸ್ಥರ ಸಹಾಯದಿಂದ ಆಟೋದಲ್ಲಿ ಬಂದು ನಂತರ ಮತಗಟ್ಟೆ ಬಳಿ ಇಡಲಾಗಿದ್ದ ವೀಲ್ ಕೇರ್ ನಲ್ಲಿ ಕೊಠಡಿಗೆ ತೆರಳಿ ಮತದಾನ ಮಾಡಿದ್ದರು. ನಂತರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಅಸು ನೀಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮತದಾನ ಮಾಡಿದ ನಂತರ ಶತಾಯುಷಿ ನಿಧನ

ಕೆ.ಆರ್.ಪೇಟೆ:ತಾಲೂಕಿನ ಅಗ್ರಹಾರಬಾಚಹಳ್ಳಿಯಲ್ಲಿ ಹಿರಿಯ ಮುಖಂಡ, ಗ್ರಾಪಂ ಮಾಜಿ ಸದಸ್ಯ ಶತಾಯುಷಿ ಸತ್ತೇಗೌಡ ಉರುಫ್ ದೊಡ್ಡೇಗೌಡ (100) ಮತದಾನ ಮಾಡಿದ ನಂತರ ನಿಧನರಾದರು.

ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಸುಡು ಬಿಸಿಲಿನ ನಡುವೆ ಯಾವುದೇ ಸಹಾಯಕರ ನೆರವಿಲ್ಲದೆ ಮನೆಯಿಂದ ನಡೆದುಕೊಂಡು ಗ್ರಾಮದ ಮತಗಟ್ಟೆ ಹೋಗಿ ಮತ ಚಲಾಯಿಸಿದ ಸತ್ತೇಗೌಡರು ಆ ನಂತರ ಮನೆಗೆ ಬಂದು ಧರಣಿವಾರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.ಸುಡು ಬಿಸಿಲಿನಲ್ಲಿ ಮತಗಟ್ಟೆಗೆ ಹೋಗಿ ಆಯಾಸಗೊಂಡ ಪರಿಣಾಮ ವಯೋಸಹಜ ಧಣಿವಿಗೆ ಒಳಗಾಗಿ ದೊಡ್ಡೇಗೌಡ ಮೃತಪಟ್ಟಿದ್ದಾರೆಂದು ಹೇಳಲಾಗಿದೆ.

ಮೃತರು ಗ್ರಾಪಂ ಸದಸ್ಯ ಚನ್ನೇಗೌಡ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆಯು ಏ.27ರ ಶನಿವಾರ ಬೆಳಗ್ಗೆ 10 ಗಂಟೆಗೆ ಸ್ವಗ್ರಾಮ ಅಗ್ರಹಾರಬಾಚಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರ ನಿಧನಕ್ಕೆ ತಾಲೂಕಿನ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.