ದರ್ಶನ್‌ಗೆ ಮತ್ತೊಂದು ಸಂಕಷ್ಟ- ಐಟಿ ಕೇಸ್‌ನಲ್ಲಿ ಸಿಲುಕುತ್ತಾರಾ ನಟ ?

| Published : Jun 22 2024, 05:00 AM IST

Darshan

ಸಾರಾಂಶ

ದರ್ಶನ್ಮನೆಯಲ್ಲಿ 37,40,000 ಲಕ್ಷ ನಗದನ್ನು ಜಪ್ತಿ ಮಾಡಲಾಗಿದ್ದು, ಪತ್ನಿ ವಿಜಯಲಕ್ಷ್ಮಿ ನಿವಾಸದಲ್ಲಿ 3 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿಗಳಿಗೆ 30 ಲಕ್ಷ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು :  ದರ್ಶನ್ಮನೆಯಲ್ಲಿ 37,40,000 ಲಕ್ಷ ನಗದನ್ನು ಜಪ್ತಿ ಮಾಡಲಾಗಿದ್ದು, ಪತ್ನಿ ವಿಜಯಲಕ್ಷ್ಮಿ ನಿವಾಸದಲ್ಲಿ 3 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿಗಳಿಗೆ 30 ಲಕ್ಷ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

 ಒಟ್ಟು ರೇಣುಕಾಸ್ವಾಮಿ ಕೇಸ್‌ನಲ್ಲಿ 30 ಲಕ್ಷ ನಗದು ಪತ್ತೆಯಾಗಿದ್ದು, ಈ ಹಣದ ಬಗ್ಗೆ ಐಟಿಗೆ ಪೊಲೀಸರು ಪತ್ರ ಬರೆಯಲಿದ್ದಾರೆ. 10 ಲಕ್ಷಕ್ಕಿಂತ ಹೆಚ್ಚು ನಗದು ಪತ್ತೆಯಾದರೆ ಐಟಿಗೆ ಮಾಹಿತಿ ನೀಡಬೇಕಾಗಿದೆ.

 ಹಾಗಾಗಿ ದರ್ಶನ್ ಕೇಸ್‌ನಲ್ಲಿಯೂ ಐಟಿಗೆ ಖಾಕಿ ಮಾಹಿತಿ ನೀಡಲಿದೆ. ಕೊಲೆ ಕೇಸ್ ಜತೆ ದರ್ಶನ್‌ಗೆ ಐಟಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ದರ್ಶನ್ ಸಿನಿಮಾ ಅಡ್ವಾನ್ಸ್ , ಸಿನಿಮಾ ಹಣ ಅಂತ ಹೇಳಿದ್ರು ಸಂಕಷ್ಟ ಎದುರಾಗಲಿದೆ. ಇಷ್ಟು ಕ್ಯಾಶ್ ಏಕೆ ಇಟ್ಟುಕೊಂಡಿದ್ದರು ಎಂದು ಪ್ರಶ್ನೆ ಎದುರಾಗುವ ಸಾಧ್ಯತೆ ಇದೆ. ಹಣಕ್ಕೆ ಟ್ಯಾಕ್ಸ್ ಕಟ್ಟಿದ್ದಾರಾ ಅಂತ ಐಟಿ ಅಧಿಕಾರಿಗಳು ಚೆಕ್ ಮಾಡಲಿದ್ದಾರೆ.