ಬೈಕ್‌ಗೆ ಡಿಕ್ಕಿ ಆಗಿದ್ದಕ್ಕೆ ರಸ್ತೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ: ಆರೋಪಿ ಸೆರೆ

| Published : Feb 19 2024, 01:35 AM IST / Updated: Feb 19 2024, 11:50 AM IST

Jail
ಬೈಕ್‌ಗೆ ಡಿಕ್ಕಿ ಆಗಿದ್ದಕ್ಕೆ ರಸ್ತೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ: ಆರೋಪಿ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಬೈಕ್‌ ಟಚ್ ಆಗಿದ್ದಕ್ಕೆ ಇನ್ನೊಬ್ಬ ಬೈಕ್‌ ಸವಾರನ ಮೇಲೆ ಏಕಾಏಕಿ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದ ಬೈಕ್‌ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ನಡು ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನ್ನಲ್ಲೇ ಆ ವಿಡಿಯೋ ಆಧರಿಸಿ ಎಚ್‌ಎಎಲ್‌ ಠಾಣೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಕುಂದನಹಳ್ಳಿ ನಿವಾಸಿ ರಾಕೇಶ್‌(23) ಬಂಧಿತ. ಫೆ.1ರಂದು ಸಂಜೆ 7ರ ಸುಮಾರಿಗೆ ಎಚ್‌ಎಎಲ್‌ ಠಾಣಾ ವ್ಯಾಪ್ತಿಯ ಕುಂದನಹಳ್ಳಿ ಸಿಗ್ನಲ್‌ ಬಳಿ ಈ ಘಟನೆ ನಡೆದಿದೆ. ಅಂದು ಕುಂದನಹಳ್ಳಿ ಸಿಗ್ನಲ್‌ನಲ್ಲಿ ಆರೋಪಿ ರಾಕೇಶ್‌ ಮತ್ತು ಹಲ್ಲೆಗೆ ಒಳಗಾದ ವ್ಯಕ್ತಿಯ ದ್ವಿಚಕ್ರ ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿವೆ. 

ಇದರಿಂದ ರೊಚ್ಚಿಗೆದ್ದ ರಾಕೇಶ್‌, ಏಕಾಏಕಿ ಕೆಳಗೆ ಇಳಿದು ಮತ್ತೊಂದು ದ್ವಿಚಕ್ರ ವಾಹನ ಸವಾರನ ಮೇಲೆ ನಡು ರಸ್ತೆಯಲ್ಲಿ ಎಳೆದಾಡಿಕೊಂಡು ಹಲ್ಲೆ ಮಾಡಿದ್ದಾನೆ.

ಈ ಹಲ್ಲೆ ದೃಶ್ಯಾವಳಿಯನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಎಚ್‌ಎಎಲ್‌ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ವೈರಲ್‌ ವಿಡಿಯೋ ಹಾಗೂ ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ, ಹಲ್ಲೆ ಮಾಡಿದ್ದ ಆರೋಪಿ ರಾಕೇಶ್‌ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಹಲ್ಲೆಗೆ ಒಳಗಾದ ಸವಾರನ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಘಟನೆ ಬಳಿಕ ಆತ ಸ್ಥಳದಿಂದ ತೆರಳಿದ್ದಾನೆ. ಆತನ ಪತ್ತೆಗೂ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಡಿಗೆ ಮನೇಲಿ ವಿದೇಶಿಗಳವೇಶ್ಯಾವಾಟಿಕೆ: ಸಿಸಿಬಿ ದಾಳಿಕನ್ನಡಪ್ರಭ ವಾರ್ತೆ ಬೆಂಗಳೂರುಬಾಡಿಗೆ ಮನೆಗೆ ಗ್ರಾಹಕರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಿದೇಶಿ ಮಹಿಳೆಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಮಹಿಳಾ ಸಂರಕ್ಷಣೆ ದಳದ ಪೊಲೀಸರು ಬಂಧಿಸಿದ್ದಾರೆ. 

ದಂಧೆಯಲ್ಲಿ ಸಿಲುಕಿದ್ದ ಮೂವರು ವಿದೇಶಿ ಮಹಿಳೆಯರನ್ನು ರಕ್ಷಿಸಿದ್ದಾರೆ.ಕೂಡ್ಲು ಮುಖ್ಯರಸ್ತೆಯ ಸಫೀನಾ ಬಂಧಿತೆ. ಈಕೆ ಕೂಡ್ಲು ಮುಖ್ಯರಸ್ತೆಯಲ್ಲಿ ವಾಸಕ್ಕೆ ಮನೆಯೊಂದನ್ನು ಬಾಡಿಗೆ ಪಡೆದಿದ್ದಳು. 

ಆದರೆ, ಕೆಲವು ವಿದೇಶಿ ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಮನೆಗೆ ಕರೆತಂದು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡು ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಳು. 

ಈ ಸಂಬಂಧ ದೊರೆತ ಖಚಿತ ಮಾಹಿತಿ ಮೇರೆಗೆ ಆ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ.ದಾಳಿ ವೇಳೆ ದಂಧೆಯಲ್ಲಿ ಸಿಲುಕಿದ್ದ ಮೂವರು ವಿದೇಶಿ ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.