ಸಾರಾಂಶ
ಢಾಕಾ/ಕೋಲ್ಕತಾ: ಭಾರತದ ಗಡಿಗೆ ಹೊಂದಿಕೊಂಡಿರುವ ಬಾಂಗ್ಲಾದೇಶದ ಝೆನೈಡಾ ಕ್ಷೇತ್ರದ ಸಂಸದ ಅನ್ವರುಲ್ ಅಜೀಂ ಅನರ್ ಕೋಲ್ಕತಾದಲ್ಲಿ ಹತ್ಯೆಯಾಗಿದ್ದಾರೆ. 10 ದಿನದ ಹಿಂದೆ ಕೋಲ್ಕತಾಗೆ ಬಂದ ನಂತರ ಅನ್ವರುಲ್ ನಾಪತ್ತೆ ಆಗಿದ್ದರು. ಬುಧವಾರ ಅವರ ಹತ್ಯೆ ಬೆಳಕಿಗೆ ಬಂದಿದೆ.
ಇದರ ನಡುವೆ ಬಂಗಾಳ ಪೊಲೀಸರು ಸಿಐಡಿ ತನಿಖೆ ಆರಂಭಿಸಿದ್ದಾರೆ. ಇನ್ನೊಂದು ಕಡೆ ಹತ್ಯೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶದಲ್ಲಿ ಮೂವರನ್ನು ಬಂಧಿಸಲಾಗಿದೆ.
ಈ ಕುರಿತು ಬಾಂಗ್ಲಾದೇಶದ ಗೃಹ ಸಚವ ಅಸಾದುಜ್ಜಾ಼ಮನ್ ಖಾನ್ ಮಾಹಿತಿ ನೀಡಿದ್ದು, ‘ಅನ್ವರುಲ್ ಕೋಲ್ಕತಾದಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಮೇ 12ರಂದು ತೆರಳಿದ್ದರು. ಬಳಿಕ ನಾಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಮೇ 18ರಂದು ದೂರು ದಾಖಲಿಸಲಾಗಿತ್ತು. ಅವರನ್ನು ಬಾಂಗ್ಲಾದೇಶಿ ಮೂಲದ ಮೂರು ಯುವಕರು ಫ್ಲ್ಯಾಟ್ ಒಂದರಲ್ಲಿ ಹತ್ಯೆ ಮಾಡಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮೂವರನ್ನು ಬಾಂಗ್ಲಾದೇಶದಲ್ಲಿ ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಆದರೆ ಅನರ್ ಶವ ಇನ್ನೂ ಭಾರತದಲ್ಲೇ ಇದೆ. ಅದನ್ನು ಬಾಂಗ್ಲಾದೇಶಕ್ಕೆ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ.