ಸಾರಾಂಶ
ಪೇಪರ್ ಮಿಲ್ ಕಾಲೋನಿ ನಿವಾಸಿ ಮಹದೇವರ ಪುತ್ರ ಸುರೇಶ (22) ಅಂತಿಮ ಬಿಇ ಒದುತ್ತಿದ್ದು ಜುವಾರಿ ಅಡ್ವೆಂಜ್ ಅಪಾರ್ಟ್ ಮೆಂಟ್‌ನಲ್ಲಿ ತಮ್ಮ ಸಂಬಂದಿಕರು ನಡೆಸುತ್ತಿದ್ದ ದಿನಸಿ ಸ್ಟೋರ್ಸ್ ನಲ್ಲಿ ಡೆಲಿವರಿ ಬಾಯ್ ಆಗಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದನು. ಚೆನ್ನಾಗಿ ಓದುತ್ತಿದ್ದ ಸುರೇಶ ಸಂತೋಷದಿಂದ ಕೂಡ ಇದ್ದ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಅಪಾರ್ಟ್ ಮೆಂಟ್‌ನ 12 ನೇ ಬುಹುಮಹಡಿ ವಸತಿ ಗೃಹ ಮೇಲಿಂದ ಹಾರಿ ಬಿಇ ಅಂತಿಮ ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುಲಿಕರೆ ಗ್ರಾಮದಲ್ಲಿನ ಕೆಆರ್‌ಎಸ್ ಮುಖ್ಯ ರಸ್ತೆಯ ಜುವಾರಿ ಅಡ್ವೆಂಜ್ ಅಪಾರ್ಟ್ ಮೆಂಟ್‌ನಲ್ಲಿ ನಡೆದಿದೆ.ಪೇಪರ್ ಮಿಲ್ ಕಾಲೋನಿ ನಿವಾಸಿ ಮಹದೇವರ ಪುತ್ರ ಸುರೇಶ (22) ಅಂತಿಮ ಬಿಇ ಒದುತ್ತಿದ್ದು ಜುವಾರಿ ಅಡ್ವೆಂಜ್ ಅಪಾರ್ಟ್ ಮೆಂಟ್‌ನಲ್ಲಿ ತಮ್ಮ ಸಂಬಂದಿಕರು ನಡೆಸುತ್ತಿದ್ದ ದಿನಸಿ ಸ್ಟೋರ್ಸ್ ನಲ್ಲಿ ಡೆಲಿವರಿ ಬಾಯ್ ಆಗಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದನು. ಚೆನ್ನಾಗಿ ಓದುತ್ತಿದ್ದ ಸುರೇಶ ಸಂತೋಷದಿಂದ ಕೂಡ ಇದ್ದ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ ಎಂದು ಪೋಷಕರು ತಿಳಿಸಿದ್ದಾರೆ. ಈ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಡೆಂಘೀ ಜ್ವರದಿಂದ ವಸಂತಕುಮಾರಿ ನಿಧನ
ಪಾಂಡವಪುರ: ಪಟ್ಟಣದ ಕೃಷ್ಣಾನಗರದ ನಿವಾಸಿ ವಸಂತ್ ಅವರ ಪತ್ನಿ ವಸಂತಕುಮಾರಿ (45) ಅನಾರೋಗ್ಯದಿಂದ ನಿಧನರಾದರು. ಡೆಂಘೀ ಜ್ವರದಿಂದ ಬಳಲುತ್ತಿದ್ದ ಇವರನ್ನು ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯಾಹ್ನ 1.30ರಲ್ಲಿ ಕೊನೆಯುಸಿರೆಳೆದರು. ಮೃತರಿಗೆ ಓರ್ವ ಪುತ್ರಿ ಇದ್ದಾಳೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಪಟ್ಟಣದ ರುದ್ರಭೂಮಿಯಲ್ಲಿ ಜರುಗಿತು.