ಮಾಹಿತಿ ಕದಿವ ‘ಪಿಂಕ್‌ ವಾಟ್ಸಾಪ್‌’ ಬಗ್ಗೆ ಎಚ್ಚರ

| Published : Jan 25 2024, 02:03 AM IST / Updated: Jan 25 2024, 05:20 AM IST

ಸಾರಾಂಶ

ಮಾಹಿತಿ ಕದಿಯುವ ಗುಲಾಬಿ ಬಣ್ಣದ ವಾಟ್ಸಪ್ ಬಳಕೆ ಮಾಡದಂತೆ ಬೆಂಗಳೂರು ನಗರ ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ವಂಚಿಸಲು ಸೈಬರ್ ಕ್ರಿಮಿನಲ್‌ಗಳು ಹೊಸ ಅಸ್ತ್ರ ಪ್ರಯೋಗಿಸಿದ್ದು, ಈಗ ಗುಲಾಬಿ ಬಣ್ಣದ ವಾಟ್ಸ್ ಆಪ್‌ ಲಿಂಕ್ ಕಳುಹಿಸಿ ಖಾಸಗಿ ಮಾಹಿತಿ ಕದಿಯಲು ಯತ್ನಿಸಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

‘ಗುಲಾಬಿ ಬಣ್ಣದ ವಾಟ್ಸ್‌ ಆಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ. ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ ಆಪ್‌ ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೆ ಆ್ಯಂಡ್ರಾಯ್ಡ್‌ ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ’ ಎಂದು ಎಕ್ಸ್‌ನಲ್ಲಿ ರಾಜ್ಯ ಪೊಲೀಸರು ಮನವಿ ಮಾಡಿದ್ದಾರೆ.

ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ರಾಜ್ಯ ಪೊಲೀಸರು ಮನವಿ ಮಾಡಿದ್ದು, ಈ ಸಂಬಂಧ ‘ಎಕ್ಸ್‌’ ಹಾಗೂ ‘ಫೇಸ್‌ ಬುಕ್‌’ ತಾಣಗಳಲ್ಲಿ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿ ಜನರಿಗೆ ಪೊಲೀಸರು ವಿನಂತಿಸಿದ್ದಾರೆ.