ಶ್ರೀರಂಗಪಟ್ಟಣ : ಕಾರು ಡಿಕ್ಕಿಯಾಗಿ ಸ್ಕೂಟರ್ ಚಾಲಕ ಹಳ್ಳಕ್ಕೆ ಬಿದ್ದು ಸ್ಥಳದಲ್ಲೇ ಸಾವು

| Published : Jan 20 2025, 01:31 AM IST / Updated: Jan 20 2025, 04:39 AM IST

ಸಾರಾಂಶ

ಚಂದ್ರಶೇಖರ್ ಕೆ.ಆರ್.ಸಾಗರದ ಸಂತೆಗೆ ಬರುತ್ತಿದ್ದ ವೇಳೆ ಎದರುಗಡೆಯಿಂದ ರಭಸವಾಗಿ ಬಂದ ಕಾರು ತನ್ನ ಮುಂದಿದ್ದ ಮತ್ತೊಂದು ವಾಹನವನ್ನು ಹಿಂದಿಕ್ಕುವ ರಭಸದಲ್ಲಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.  

 ಶ್ರೀರಂಗಪಟ್ಟಣ : ಕಾರು ಡಿಕ್ಕಿಯಾಗಿ ಸ್ಕೂಟರ್ ಚಾಲಕ ಹಳ್ಳಕ್ಕೆ ಬಿದ್ದು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ತಾಲೂಕಿನ ಕೆ.ಆರ್.ಸಾಗರ ನಾತ್೯ಬ್ಯಾಂಕ್ ಗ್ರಾಮದ ರಸ್ತೆ ವಿಸಿ ನಾಲೆ ಸಮೀಪ ನಡೆದಿದೆ.

ಪಾಂಡವಪುರ ತಾಲೂಕು ಬನ್ನಂಗಾಡಿ ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಂದ್ರಶೇಖರ್ (46) ಮೃತ ಸ್ಕೂಟರ್ ಚಾಲಕ. ಚಂದ್ರಶೇಖರ್ ಕೆ.ಆರ್.ಸಾಗರದ ಸಂತೆಗೆ ಬರುತ್ತಿದ್ದ ವೇಳೆ ಎದರುಗಡೆಯಿಂದ ರಭಸವಾಗಿ ಬಂದ ಕಾರು ತನ್ನ ಮುಂದಿದ್ದ ಮತ್ತೊಂದು ವಾಹನವನ್ನು ಹಿಂದಿಕ್ಕುವ ರಭಸದಲ್ಲಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಲ್ಲದೇ ಕಾರಿನ ಏರ್ ಬ್ಯಾಗ್ ತೆರದಿರುವ ಕಾರಣ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. 108 ಮೂಲಕ ಮೈಸೂರು ಜಿಲ್ಲಾಸ್ಪತ್ರಗೆ ಕೆ.ಆರ್.ಸಾಗರ ಪೊಲಿಸರು ಕಳಸಿದ್ದಾರೆ.

ಕಾರು ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ. ಆತನನ್ನು ಸ್ಥಳಕ್ಕೆ ಕರೆತಂದು ಪರಿಹಾರ ನೀಡುವ ತನಕ ಶವ ತೆಗೆಯುವುದಿಲ್ಲ ಎಂದು ಬನ್ನಂಗಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ರಸ್ತೆಯಲ್ಲೇ ಶವ ಇಟ್ಟು ಕೆಲ ಕಾಲ ರಸ್ತೆ ತಡೆ ನಡೆಸಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಈ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವಜಾತ ಶಿಶು ಮೃತದೇಹ ಪತ್ತೆ

ಶ್ರೀರಂಗಪಟ್ಟಣ: ಟೌನ್ ವೆಲ್ಲೆಸ್ಲಿ ಸೇತುವೆಯ ಕೆಳಗೆ ಗಂಡು ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಶಿಶುವಿಗೆ ಸುಮಾರು 1-2 ತಿಂಗಳಾಗಿದೆ. ಗೋಧಿ ಮೈಬಣ್ಣ, 61 ಸೆ.ಮೀ. ಎತ್ತರವಿದೆ ಎಂದು ಗುರುತಿಸಲಾಗಿದೆ. ವಾರಸುದಾರರಿದ್ದಲ್ಲಿ ಪೊಲೀಸ್ ಠಾಣೆ ದೂ.ಸಂ.08232-22488 ಅಥವಾ ಮೊ-9480804800 ಅನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.