ರಸ್ತೆ ನಿಯಮ ಪಾಲಿಸದ ವಾಟರ್‌ ಟ್ಯಾಂಕರ್‌ ಚಾಲಕರ ವಿರುದ್ಧ ಕೇಸ್‌

| Published : Feb 18 2024, 01:36 AM IST / Updated: Feb 18 2024, 03:55 PM IST

ರಸ್ತೆ ನಿಯಮ ಪಾಲಿಸದ ವಾಟರ್‌ ಟ್ಯಾಂಕರ್‌ ಚಾಲಕರ ವಿರುದ್ಧ ಕೇಸ್‌
Share this Article
  • FB
  • TW
  • Linkdin
  • Email

ಸಾರಾಂಶ

ನಗರ ದಕ್ಷಿಣ ಸಂಚಾರ ವಿಭಾಗದ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಸಂಚಾರ ನಿಯಮ ಉಲ್ಲಂಘಿಸಿದ 17 ಮಂದಿ ವಾಟರ್‌ ಟ್ಯಾಂಕರ್‌ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ₹8,500 ದಂಡ ವಸೂಲಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರ ದಕ್ಷಿಣ ಸಂಚಾರ ವಿಭಾಗದ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಸಂಚಾರ ನಿಯಮ ಉಲ್ಲಂಘಿಸಿದ 17 ಮಂದಿ ವಾಟರ್‌ ಟ್ಯಾಂಕರ್‌ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ₹8,500 ದಂಡ ವಸೂಲಿ ಮಾಡಿದ್ದಾರೆ.

ದಕ್ಷಿಣ ಸಂಚಾರ ವಿಭಾಗದ ವ್ಯಾಪ್ತಿಯಲ್ಲಿ ಗುರುವಾರ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘಿಸಿದ ವಾಟರ್‌ ಟ್ಯಾಂಕರ್‌ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

6 ಸಮವಸ್ತ್ರ ಧರಸದಿರುವುದು, ಸೀಟ್‌ ಬೆಲ್ಟ್‌ ಧರಿಸದಿರುವುದು 1, ದೋಷಪೂರಿತ ನೋಂದಣಿ ಫಲಕ 2, ನೋ ಪಾರ್ಕಿಂಗ್‌ 2 ಹಾಗೂ ಕರ್ಕಶ ಶಬ್ಧ ಉಂಟು ಮಾಡುವ ಹಾರ್ನ್‌ ಅಳವಡಿಕೆ 2 ಸೇರಿದಂತೆ ಒಟ್ಟು 17 ಪ್ರಕರಣ ದಾಖಲಿಸಿದ್ದಾರೆ.

ಪಾಲಿಕೆ ವಾಹನ ವಿರುದ್ಧ ಪ್ರಕರಣ:

ದಕ್ಷಿಣ ಸಂಚಾರ ವಿಭಾಗದ ವ್ಯಾಪ್ತಿಯಲ್ಲಿ ಶುಕ್ರವಾರ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಸಂಚಾರ ನಿಯಮ ಉಲ್ಲಂಘಿಸಿದ 46 ಬಿಬಿಎಂಪಿ ವಾಹನಗಳ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಚಾಲಕರಿಂದ ₹22,700 ದಂಡ ವಸೂಲಿ ಮಾಡಿದ್ದಾರೆ.