ಸಾರಾಂಶ
ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಆನೆದೊಡ್ಡಿ ಗ್ರಾಮದ ಸುಮಾರು 20 ಮಂದಿ ರೈತರು ತಮ್ಮ ಹಿಡುವಳಿ ಜಮೀನಿನಲ್ಲಿ ಬೆಳೆಯಲಾಗಿದ್ದ 150 ತೆಂಗಿನ ಮರಗಳು, ಮಾವಿನ ಮರಗಳು ಹಾಗೂ ಐದು ಎಕರೆ ಪ್ರದೇಶದಲ್ಲಿದ್ದ ನೀಲಗಿರಿ ಮರಗಳು ಬೆಂಕಿಯ ಕೆನಾಲಿಗೆ ಇಂದ ಸುಟ್ಟು ಹೋಗಿವೆ.
ಮದ್ದೂರು : ಆಕಸ್ಮಿಕ ಬೆಂಕಿ ಬಿದ್ದು ರೈತರ ಜಮೀನಿನಲ್ಲಿದ್ದ ತೆಂಗು, ಮಾವು, ನೀಲಗಿರಿ ಮರಗಳು ನಾಶವಾಗಿ ಅಪಾರ ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿ ಆನೆದೊಡ್ಡಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಈಶ್ವರ, ಆನಂದ, ರಾಜಣ್ಣ, ರಮೇಶ, ದೊಡ್ಡೋನು, ಶಿವಲಿಂಗಯ್ಯ, ಶ್ರೀಧರ್, ಅಪ್ಪಾಜಿ ಸೇರಿದಂತೆ ಸುಮಾರು 20 ಮಂದಿ ರೈತರು ತಮ್ಮ ಹಿಡುವಳಿ ಜಮೀನಿನಲ್ಲಿ ಬೆಳೆಯಲಾಗಿದ್ದ 150 ತೆಂಗಿನ ಮರಗಳು, ಮಾವಿನ ಮರಗಳು ಹಾಗೂ ಐದು ಎಕರೆ ಪ್ರದೇಶದಲ್ಲಿದ್ದ ನೀಲಗಿರಿ ಮರಗಳು ಬೆಂಕಿಯ ಕೆನಾಲಿಗೆ ಇಂದ ಸುಟ್ಟು ಹೋಗಿವೆ.
ಘಟನೆಯಿಂದ ಸುಮಾರು ಐದು ಲಕ್ಷಕ್ಕೂರೂ ಗಳಿಗೂ ಮೀರಿ ಹಾನಿಯಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ. ಬೆಂಕಿ ಅನಾಹುತದಿಂದ ಹಾನಿಗೊಳ ಗಾಗಿ ಮರಗಳನ್ನು ಕಳೆದುಕೊಂಡ ರೈತರಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಸುನಿತಾ ರಾಮೇಗೌಡ ಆಗ್ರಹ ಪಡಿಸಿದ್ದಾರೆ.