ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಹೆಸರಿನಲ್ಲೇ ಸೋಮವಾರ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಕಿಡಿಗೇಡಿಗಳು ಕುಚೋದ್ಯ ಮಾಡಿದ್ದಾರೆ.

ಬೆಂಗಳೂರು : ಫೇಸ್‌ಬುಕ್‌ನಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಹೆಸರಿನಲ್ಲೇ ಸೋಮವಾರ ನಕಲಿ ಖಾತೆ ತೆರೆದು ಕಿಡಿಗೇಡಿಗಳು ಕುಚೋದ್ಯ ಮಾಡಿದ್ದಾರೆ. ಈಗಾಗಲೇ ಫೇಸ್‌ಬುಕ್‌ನಲ್ಲಿ ಆಯುಕ್ತರ ಅಧಿಕೃತ ಖಾತೆ ಇದೆ.

 ಆದರೆ ‘ದಯಾನಂದ್ ಬನ್ನಿಕಲ್ ಐಪಿಎಸ್‌’ ಎಂಬ ಹೆಸರಿನಲ್ಲಿ ಆಯುಕ್ತರ ಭಾವಚಿತ್ರ ಬಳಸಿ ಖಾತೆ ತೆರೆದ ಕಿಡಿಗೇಡಿ, ಬಳಿಕ ಆಯುಕ್ತರಿಗೆ ಕೆಲ ಸ್ನೇಹಿತರಿಗೆ ರಿಕ್ವೆಸ್ಟ್ ಕಳುಹಿಸಿದ್ದ. ಈ ಬಗ್ಗೆ ಮಾಹಿತಿ ತಿಳಿದ ಆಯುಕ್ತರು, ಕೂಡಲೇ ಆ ನಕಲಿ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ. ಈ ಕೃತ್ಯ ಎಸಗಿದ ಕಿಡಿಗೇಡಿ ಪತ್ತೆಗೆ ಸೈಬರ್ ಕ್ರೈಂ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.