ಪೌತಿ ಖಾತೆ ಆಂದೋಲನದ ಸದುಪಯೋಗಕ್ಕೆ ಎಸಿ ಕರೆ
Jul 26 2025, 02:00 AM ISTಕನ್ನಡಪ್ರಭ ವಾರ್ತೆ ಇಂಡಿ: ಜಿಲ್ಲೆಯಲ್ಲಿ ಕೃಷಿ ಜಮೀನು ಮಾಲೀಕರು ಮರಣ ಹೊಂದಿದ ನಂತರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಳ್ಳಲು ಪೌತಿ ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇಂಡಿ ಉಪವಿಭಾಗದ ತಾಲೂಕುಗಳಾದ ಇಂಡಿ (6310 ಪಹಣಿಗಳು) ಚಡಚಣ (1613), ದೇವರ ಹಿಪ್ಪರಗಿ (2730), ಆಲಮೇಲ(1671) ಹಾಗೂ ಸಿಂದಗಿ (3075)ಗಳಲ್ಲಿ ಈ ಪೌತಿ ಆಂದೋಲನ ಆಯಾ ತಹಸೀಲ್ದಾರ್ ನೇತೃತ್ವದಲ್ಲಿ ಆರಂಭಿಸಲಾಗಿದೆ ಎಂದು ಎಸಿ ಅನುರಾಧಾ ವಸ್ತ್ರದ ಹೇಳಿದರು.