ಅನಧಿಕೃತ ನಿವೇಶನ, ಮನೆಗೆ 90 ದಿನದಲ್ಲಿ ಬಿ ಖಾತೆ
Feb 17 2025, 12:33 AM IST ನಗರದ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳು, ನಿವೇಶನಗಳು, ಗ್ರಾಮ ಪಂಚಾಯಿತಿ ಹಾಗೂ ನಗರದ ಹಳೆ ಪ್ರದೇಶಗಳಾದ ಗ್ರಾಮ ಠಾಣಾಗಳಿಂದ ಹಸ್ತಾಂತರಗೊಂಡಿರುವ ಹೌಸ್ ಲಿಸ್ಟ್ ಗಳ ಪ್ರದೇಶಗಳಿಗೆ ಇದೀಗ ಬಿ ಖಾತೆಗಳನ್ನು ಮಾಡಿಕೊಳ್ಳಲಾಗುವುದು. ನಗರದಲ್ಲಿ ಸರಿಸುಮಾರು 30 ಸಾವಿರಕ್ಕೂ ಅಧಿಕ ಖಾತೆಗಳಿದ್ದು ಈ ಪೈಕಿ 6 ರಿಂದ 8ಸಾವಿರ ಖಾತೆಗಳು ಅನಧಿಕೃತವಾಗಿರುವುದು ಕಂಡುಬಂದಿದೆ