ಪೌತಿ ಖಾತೆ ಆಂದೋಲನದ ಪ್ರಯೋಜನ ಪಡೆಯಿರಿ
May 22 2025, 12:48 AM ISTತಾಲೂಕಿನಲ್ಲಿ ಬಾಗೂರು ಹೋಬಳಿ ಕೇಂದ್ರ ಹೆಚ್ಚು ವಿಸ್ತೀರ್ಣ ಹಾಗೂ ಜನಸಂಖ್ಯೆಯನ್ನು ಹೊಂದಿದೆ. ಆದ್ದರಿಂದಲೇ ಪೌತಿ ಖಾತೆ ಆಂದೋಲನಕ್ಕೆ ತಾಲೂಕಿನಲ್ಲೇ ಮೊದಲು ಹೋಬಳಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ತಾಲೂಕು ಆಡಳಿತದ ವತಿಯಿಂದ ರೈತರಿಗೆ ತ್ವರಿತಗತಿಯಲ್ಲಿ ಅವರು ಸಲ್ಲಿಸುವ ಮನವಿಗಳಿಗೆ ಸ್ಪಂದಿಸುವಂತೆ ತಿಳಿಸಲಾಗಿದೆ. ಪೌತಿ ಖಾತೆ ಆಂದೋಲದಲ್ಲಿ ಈಗಾಗಲೇ ಸುಮಾರು 122 ಅರ್ಜಿಗಳು ಸಲ್ಲಿಕೆಯಾಗಿದ್ದು, ತಿದ್ದುಪಡಿಗಾಗಿ 30 ಅರ್ಜಿಗಳನ್ನು ರೈತರು ಈಗಾಗಲೇ ಸಲ್ಲಿಸಿದ್ದಾರೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.