ಆಸ್ತಿಗಳಿಗೆ ಇ-ಖಾತೆ ಮಾಡಿಸಿಕೊಳ್ಳುವುದು ಕಡ್ಡಾಯ

| Published : Aug 08 2025, 01:00 AM IST

ಸಾರಾಂಶ

ನಗರದ ನಗರಸಭಾ ವ್ಯಾಪ್ತಿಯಲ್ಲಿರುವ ನಿವೇಶನ, ಕಟ್ಟಡ ಹಾಗೂ ಆಸ್ತಿಗಳಿಗೆ ಕಡ್ಡಾಯವಾಗಿ ಇ-ಆಸ್ತಿ ಪಡೆದುಕೊಳ್ಳಬೇಕಾಗಿರುವುದರಿಂದ ಸರ್ಕಾರದ ಆದೇಶ ಹಾಗೂ ಆಶಯದಂತೆ ನಗರದ ಗಾಂಧಿನಗರದಲ್ಲಿ ಶಾಸಕ ಕೆ. ಷಡಕ್ಷರಿ ಮನೆ ಮನೆಗೆ ತೆರಳಿ ಇ-ಖಾತಾ ಆಂದೋಲನಕ್ಕೆ ಅರ್ಜಿ ನಮೂನೆ ನೀಡುವ ಮೂಲಕ ಗುರುವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ನಗರಸಭಾ ವ್ಯಾಪ್ತಿಯಲ್ಲಿರುವ ನಿವೇಶನ, ಕಟ್ಟಡ ಹಾಗೂ ಆಸ್ತಿಗಳಿಗೆ ಕಡ್ಡಾಯವಾಗಿ ಇ-ಆಸ್ತಿ ಪಡೆದುಕೊಳ್ಳಬೇಕಾಗಿರುವುದರಿಂದ ಸರ್ಕಾರದ ಆದೇಶ ಹಾಗೂ ಆಶಯದಂತೆ ನಗರದ ಗಾಂಧಿನಗರದಲ್ಲಿ ಶಾಸಕ ಕೆ. ಷಡಕ್ಷರಿ ಮನೆ ಮನೆಗೆ ತೆರಳಿ ಇ-ಖಾತಾ ಆಂದೋಲನಕ್ಕೆ ಅರ್ಜಿ ನಮೂನೆ ನೀಡುವ ಮೂಲಕ ಗುರುವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು, ರಾಜ್ಯ ಸರ್ಕಾರ ಆದೇಶದ ಮೇರೆಗೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ಜನರ ನಿವೇಶನ ಹಾಗೂ ಇತರೆ ಆಸ್ತಿಗಳ ಖಾತೆ ಆಂದೋಲನ ಮಾಡಿಸುವಂತೆ ಪ್ರತಿಯೊಂದು ಮನೆ ಮನೆಗಳಿಗೆ ತೆರಳಿ ಯಾರು ತಮ್ಮ ಆಸ್ತಿ, ನಿವೇಶನ, ಕಟ್ಟಡಗಳಿಗೆ ಖಾತೆ ಮಾಡಿಸಿಕೊಂಡಿಲ್ಲವೋ ಅಥವಾ ಬಿಟ್ಟು ಹೋಗಿರುತ್ತದೆಯೋ ಅವರಿಗೆ ಖಾತೆ ಮಾಡಿಸುವ ಮೂಲಕ ಆಸ್ತಿಯ ಹಕ್ಕನ್ನು ಕೊಡಲಾಗುತ್ತಿದೆ. ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲೂ ಖಾತಾ ಆಂದೋಲನ ಹಮ್ಮಿಕೊಳ್ಳಲಾಗಿದ್ದು ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ನಗರಸಭೆ ಅಧ್ಯಕ್ಷೆ ಯಮುನ ಧರಣೇಶ್ ಮಾತನಾಡಿ, ನಗರದ ನಾಗರೀಕರಿಗೆ ಅನುಕೂಲವಾಗಲೆಂದು ಮನೆ ಮನೆಗಳಿಗೆ ತೆರಳಿ ಖಾತಾ ಆಂದೋಲನ ನಡೆಸಲಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 30673 ಆಸ್ತಿಗಳಿದ್ದು ಈ ಪೈಕಿ 17185 ಆಸ್ತಿಗಳಿಗೆ ಇ-ಖಾತೆ ನೀಡಲಾಗಿದೆ. ಬಾಕಿ ಇರುವ ಆಸ್ತಿಗಳಿಗೆ ಇ-ಆಸ್ತಿ ನೀಡಬೇಕಾಗಿರುತ್ತದೆ. ಆದ್ದರಿಂದ ನಾವೇ ಮನೆಗಳಿಗೆ ತೆರಳಿ ಖಾತಾ ಆಂದೋಲನದ ಅರ್ಜಿಗಳನ್ನು ವಿತರಿಸಲಾಗುತ್ತಿದ್ದು ಆ.೧೦ಕೊನೆಯ ದಿನಾಂಕವಾಗಿದ್ದು ಅಷ್ಟರೊಳಗೆ ನಾಗರೀಕರು ತಮ್ಮ ತಮ್ಮ ಆಸ್ತಿಗಳ ಖಾತೆಗಳನ್ನು ಮಾಡಿಸಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಅಶ್ವಿನಿ, ಲೋಕ್‌ನಾಥಸಿಂಗ್, ಆಶೀಫಾಬಾನು, ಮಹಮ್ಮದ್ ಗೌಸ್, ಮುನ್ನಾ, ನಗರಸಭೆ ಕಂದಾಯ ಅಧಿಕಾರಿ ಸಂತೋಷ್, ವ್ಯವಸ್ಥಾಪಕ ರಾಜೇಶ್, ಮುಖ್ಯ ಇಂಜಿನಿಯರ್ ಸುನೀಲ್ ಸಿಬ್ಬಂದಿಗಳಿದ್ದರು.