ಸಾರಾಂಶ
ಎರಡು ದಿನಗಳ ಹಿಂದೆ ಮನೆಯಿಂದ ಬಾಲಕನೊಬ್ಬ ನಾಪತ್ತೆಯಾಗಿರುವ ಬಗ್ಗೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಎರಡು ದಿನಗಳ ಹಿಂದೆ ಮನೆಯಿಂದ ಬಾಲಕನೊಬ್ಬ ನಾಪತ್ತೆಯಾಗಿರುವ ಬಗ್ಗೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣಗೆರೆಯ ಎಸ್.ಎನ್.ತಿಮ್ಮರಾಜು ದಂಪತಿ ಪುತ್ರ ಜಿ.ಹರ್ಜಿತ್ ಗೌಡ ಕಣ್ಮರೆಯಾಗಿದ್ದು, ತಮ್ಮ ಪುತ್ರನ ಪತ್ತೆಗೆ ಆತನ ಪೋಷಕರು ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ ಶುಕ್ರವಾರ ಸಂಜೆ ಮೈಸೂರಿನಿಂದ ಕರೆ ಮಾಡಿದ ಹರ್ಜೀತ್ ಮತ್ತೆ ಹೆತ್ತವರ ಸಂಪರ್ಕಕ್ಕೆ ಸಿಕ್ಕಿಲ್ಲ.
ತಮ್ಮ ಪುತ್ರನ ಬಗ್ಗೆ ಮಾಹಿತಿ ಇದ್ದರೆ ಕೂಡಲೇ ಮೊ.92421 15131 ಕರೆ ಮಾಡುವಂತೆ ಬಾಲಕನ ತಂದೆ ತಿಮ್ಮರಾಜು ಮನವಿ ಮಾಡಿದ್ದಾರೆ.