ರಸ್ತೆ ವಿಭಜಕಕ್ಕೆ ಆಟೋ ಡಿಕ್ಕಿ: ಗಾಯಗೊಂಡು ಚಾಲಕ ಸಾವು

| Published : May 10 2024, 01:36 AM IST / Updated: May 10 2024, 04:52 AM IST

death

ಸಾರಾಂಶ

ರಸ್ತೆ ವಿಭಜಕ್ಕೆ ಆಟೋ ಡಿಕ್ಕಿಯಾಗಿ ಚಾಲಕ ಸಾವನ್ನಪ್ಪಿರುವ ದಾರುಣ ಘಟನೆ ಬನಶಂಕರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  ಬೆಂಗಳೂರು :  ರಸ್ತೆ ವಿಭಜಕ್ಕೆ ಆಟೋ ಡಿಕ್ಕಿಯಾಗಿ ಚಾಲಕ ಸಾವನ್ನಪ್ಪಿರುವ ದಾರುಣ ಘಟನೆ ಬನಶಂಕರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸಕೆರೆಹಳ್ಳಿ ನಿವಾಸಿ ಪೂಜಾರಿ ದೇವರಾಜ ನಾಯಕ್ (32) ಮೃತ ದುರ್ದೈವಿ. ಆಟೋ ವಹಿವಾಟು ಮುಗಿಸಿಕೊಂಡು ಬುಧವಾರ ರಾತ್ರಿ ದೇವರಾಜ ಮನೆಗೆ ಮರಳುವಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ದೇವರಾಜ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ತಮ್ಮ ತಾಯಿ ಜತೆ ಅವರು ನೆಲೆಸಿದ್ದರು. ಹೊಸಕೆರೆಹಳ್ಳಿ ಕ್ರಾಸ್‌ನಿಂದ ಬುಧವಾರ ರಾತ್ರಿ ಸೀತಾ ಸರ್ಕಲ್ ಕಡೆ ದೇವರಾಜ ನಾಯಕ್‌ ತೆರಳುವಾಗ ಈ ಅವಘಡ ಸಂಭವಿಸಿದೆ. ಚಾಲನೆ ಮೇಲೆ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅವರು ಆಟೋ ಗುದ್ದಿಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ದೇವರಾಜ್ ನಾಯಕ್ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.