ಸಾರಾಂಶ
ದಾಸರಹಳ್ಳಿ : ಪೊಲೀಸ್ ಐಡಿ ಕಾರ್ಡ್ ಹಿಡಿದು ಎಲ್ಲರಿಗೂ ಆವಾಜ್ ಹಾಕಿಕೊಂಡು ಓಡಾಡುತ್ತಿದ್ದ ಕಳ್ಳ ಖಾಕಿಯನ್ನು ಬಂಧಿಸಲಾಗಿದೆ.
ಪಿಎಸ್‌ಐ ಮಂಜುನಾಥ್ ಎಂಬುವರ ಐಡಿ ಕಾರ್ಡ್ ಬಳಸಿ ಟೋಲ್ ಪ್ಲಾಜಾ ಮತ್ತು ವಿಮಾನ ನಿಲ್ದಾಣಗಳಲ್ಲಿ ಪೊಲೀಸ್ ಎಂದು ಹೇಳಿಕೊಂಡು ಓಡಾಡುತ್ತಿದ್ದ ಕರಿಹೋಬನಹಳ್ಳಿಯ ರವಿ ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ಪೀಣ್ಯ ಪೊಲೀಸರು ಬಂಧಿಸಿದ್ದಾರೆ.ಆರೋಪಿಯು ಪಿಎಸ್‌ಐ ಮಂಜುನಾಥ್ ಎಂಬುವರ ಐಡಿ ಕಾರ್ಡಿಗೆ ತನ್ನ ಫೋಟೋ ಹಾಕಿ ಆವಾಜ್ ಹಾಕುತ್ತಿದ್ದ.
‘ಏಯ್ ಪೊಲೀಸಪ್ಪ ನಾನು’ ಎಂದು ಆವಾಜ್:
ಬಂಧಿತ ರವಿ ಎಲ್ಲಾ ಕಡೆ ‘ಏಯ್ ಪೊಲೀಸಪ್ಪ ನಾನು’ ಅಂತ ಐಡಿ ಕಾರ್ಡ್ ತೋರಿಸುತ್ತಿದ್ದ. ರವಿ ಶೇಷಾದ್ರಿಪುರಂನ ರೇಣುಕಾ ಶುಗರ್ಸ್ನಲ್ಲಿ ಫೀಲ್ಡ್ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದ. ಆದರೆ ಏಕಾಏಕಿ ಪೊಲೀಸ್ ಐಡಿ ಕಾರ್ಡ್ ಹಿಡಿದು ಓಡಾಡುವುದಕ್ಕೆ ಶುರು ಮಾಡಿದ್ದರು.ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ನ ಇಮಿಗ್ರೇಷನ್ ಬಳಿಯೂ ರವಿ ಐಡಿ ಕಾರ್ಡ್ ತೋರಿಸಿದ್ದ. ಐಡಿ ಸ್ಕ್ಯಾನ್ ಮಾಡಿದ್ದ ಇಮಿಗ್ರೇಷನ್ ಅಧಿಕಾರಿಗಳಿಗೆ ಆರೋಪಿ ರವಿ ಮೇಲೆ ಅನುಮಾನ ಬಂದಿತ್ತು. ಎದುರುಗಡೆ ಇರುವ ವ್ಯಕ್ತಿನೇ ಬೇರೆ ಐಡಿ ನಂಬರೇ ಬೇರೆ ಎನ್ನುವುದು ಪಕ್ಕಾ ಆಗಿತ್ತು. ಬಳಿಕ ಇಮಿಗ್ರೇಷನ್ನಿಂದ ನೇರವಾಗಿ ಸ್ಟೇಟ್ ಇಂಟ್ಗೆ ಮಾಹಿತಿ ಹೋಗಿತ್ತು. ಮಾಹಿತಿ ತಿಳಿದ ಪೀಣ್ಯ ಪೊಲೀಸರು ಆರೋಪಿ ರವಿಯನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.