ಸಾಲ ಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆ..!

| Published : Nov 10 2025, 12:45 AM IST

ಸಾರಾಂಶ

ಸಾಲದ ಬಾಧೆಗೆ ರೈತರು ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಮಂಡ್ಯ ಜಿಲ್ಲೆಯಲ್ಲಿ ಸಾಮಾನ್ಯವಾಗಿದ್ದು ಕೃಷಿಯಲ್ಲಿ ಲಾಭವನ್ನು ಕಾಣದಷ್ಟು ರೈತ ಕಂಗೆಟ್ಟಿದ್ದಾನೆ. ಕೃಷ್ಣೇಗೌಡರು ಸಾವಿನಿಂದ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದರಿಂದ ಇವರ ಅಗಲಿಕೆಯಿಂದ ಕುಟುಂಬವು ಅಕ್ಷರಶಃ ಅನಾಥವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಬೆಳತೂರು ಗ್ರಾಮದ ಕೃಷ್ಣೇಗೌಡ (47) ಎಂಬ ರೈತ ಸಾಲದ ಬಾಧೆಯನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ಗ್ರಾಮದಲ್ಲಿ 2 ಎಕರೆ ಕೃಷಿ ಜಮೀನನ್ನು ಹೊಂದಿರುವ ಕೃಷ್ಣೇಗೌಡ ಕೃಷಿ ಚಟುವಟಿಕೆಗಾಗಿ ಬ್ಯಾಂಕ್ ಹಾಗೂ ಕೆಲವು ಸಂಘ ಸಂಸ್ಥೆಗಳಲ್ಲಿ ಸುಮಾರು 4 ಲಕ್ಷ ರು. ಸಾಲ ಮಾಡಿದ್ದಾರೆಂದು ತಿಳಿದುಬಂದಿದೆ. ಕೆಲವು ಖಾಸಗಿ ಸಂಘ-ಸಂಸ್ಥೆಗಳ ತೀವ್ರ ಒತ್ತಡವನ್ನು ತಾಳಲಾರದೆ ಕೃಷ್ಣೇಗೌಡ ಮನೆಯಲ್ಲಿಯೇ ಕ್ರಿಮಿನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಕೃಷ್ಣೇಗೌಡರಿಗೆ ಪತ್ನಿ ರೇಖಾ ಸೇರಿದಂತೆ ಇಬ್ಬರು ಗಂಡುಮಕ್ಕಳು ಇದ್ದಾರೆ.

ಸಾಲದ ಬಾಧೆಗೆ ರೈತರು ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಮಂಡ್ಯ ಜಿಲ್ಲೆಯಲ್ಲಿ ಸಾಮಾನ್ಯವಾಗಿದ್ದು ಕೃಷಿಯಲ್ಲಿ ಲಾಭವನ್ನು ಕಾಣದಷ್ಟು ರೈತ ಕಂಗೆಟ್ಟಿದ್ದಾನೆ. ಕೃಷ್ಣೇಗೌಡರು ಸಾವಿನಿಂದ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದರಿಂದ ಇವರ ಅಗಲಿಕೆಯಿಂದ ಕುಟುಂಬವು ಅಕ್ಷರಶಃ ಅನಾಥವಾಗಿದೆ.

ಕೃಷ್ಣೇಗೌಡರ ಶವವನ್ನು ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಗೆ ತಂದು ಮರಣೋತ್ತರ ಪರಿಕ್ಷೆಯನ್ನು ನಡೆಸಿ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಮೃತರ ಬಂಧುಗಳ ರೋಧನವು ಮುಗಿಲುಮುಟ್ಟಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲಾಗಿದೆ.

ಪರಿಹಾರಕ್ಕೆ ಆಗ್ರಹ:

ಮೃತ ಕೃಷ್ಣೇಗೌಡ ಒಬ್ಬ ಬಡ ಕೂಲಿಕಾರನಾಗಿದುಬ್ಬಿಡಿ ಕುಟುಂಬ ಇವರ ದುಡಿಮೆಯನ್ನೆ ಅವಲಂಬಿಸಿತ್ತು. ಕೃಷ್ಣೆಘವಡರ ಆತ್ಮಹತ್ಯೆಯಿಂದ ಇಡಿ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿದೆ. ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಕುಟುಂಬದ ರಕ್ಷಣೆಗೆ ಧಾವಿಸಿ ಸಾಲವನ್ನು ವಜಾಗೊಳಿಸಬೇಕು ಹಾಗೂ ಕುಟುಂಬದ ನಿರ್ವಹಣೆಗೆ ಆರ್ಥಿಕ ಸಹಾಯವನ್ನು ನೀಡಬೇಕು ಎಂದು ಬೆಳತೂರು ಗ್ರಾಮದ ಯುವ ಮುಖಂಡ ರಘು ಆಗ್ರಹಿಸಿದ್ದಾರೆ.