ಸಾರಾಂಶ
ಸ್ವತಃ ತಂದೆಯೇ ಮಗಳ ಫೇಕ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾನೆ ಎಂದು ತಾಯಿ ಪಡುಬಿದ್ರಿ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ.
ಉಡುಪಿ : ಸ್ವತಃ ತಂದೆಯೇ ಮಗಳ ಫೇಕ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾನೆ ಎಂದು ತಾಯಿ ಪಡುಬಿದ್ರಿ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ.
ಆರೋಪಿ ಆಸೀಫ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಆಕೆಯ ಪತ್ನಿ ಶಬನಮ್ ದೂರು ನೀಡಿದ್ದಾಳೆ. ಆಕೆಯ ದೂರಿನಂತೆ ದ್ವಿತೀಯ ಪಿಯುಸಿ ಕಲಿಯುತ್ತಿರುವ ಮಗಳು, ಹುಡುಗನೊಬ್ಬನ್ನು ಪ್ರೀತಿಸುತಿದ್ದ ಕಾರಣಕ್ಕೆ ಆಸೀಫ್, ಮಗಳು ಮತ್ತು ಹುಡುಗನ ಫೋಟೋ, ವೀಡಿಯೋ ಎಡಿಟ್ ಮಾಡಿ ವಾಟ್ಸಾಪ್ ಗ್ರೂಪ್‌ನಲ್ಲಿ ಹಾಕಿದ್ದ. ಇದರಿಂದ ಮನನೊಂದ ಹುಡುಗಿ ಪಿನಾಯಿಲ್ ಕುಡಿದು ಆತ್ಮಹತ್ಯೆ ಯತ್ನಿಸಿದ್ದಳು. ಆಕೆಯನ್ನು ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಲ್ಲದೆ ತನ್ನ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದಾಗಿ ಆಕೆ ಆರೋಪಿಸಿದ್ದಾರೆ.
ಅನಾಥರ ಆಶ್ರಮವನ್ನು ನಡೆಸುತ್ತಿರುವ ಆಸೀಫ್ ಮೇಲೆ ಪಡುಬಿದ್ರಿ ಠಾಣೆಯಲ್ಲಿ ಹಲ್ಲೆ, ಐಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ.