ಮಹಿಳೆ ಸೇರಿ ನಾಲ್ವರ ಸೆರೆ: ₹1.96 ಕೋಟಿಯ ಚಿನ್ನ ಜಪ್ತಿ

| Published : May 20 2024, 01:34 AM IST / Updated: May 20 2024, 05:00 AM IST

ಸಾರಾಂಶ

ಜೀನ್ಸ್‌ ಪ್ಯಾಂಟ್‌, ಟಿ ಶರ್ಟ್‌ನಲ್ಲಿ ಪೇಸ್ಟ್‌ ಮತ್ತು ಪೌಡರ್‌ ರೂಪದಲ್ಲಿ ಚಿನ್ನ ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿರುವಾಗ ಸಿಕ್ಕಿಬಿದ್ದ ಆರೋಪಿಗಳು.

 ಬೆಂಗಳೂರು :  ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮಹಿಳೆ ಸೇರಿ ನಾಲ್ವರು ಪ್ರಯಾಣಿಕರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಆರೋಪಿಗಳಿಂದ ₹1.96 ಕೋಟಿ ಮೌಲ್ಯದ 2 ಕೆ.ಜಿ. 814 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ.

ಶನಿವಾರ ರಾತ್ರಿ ದುಬೈನಿಂದ ವಿಮಾನ ನಿಲ್ದಾಣಕ್ಕೆ ಬಂದ ಇಕೆ-568 ವಿಮಾನದ ಪ್ರಯಾಣಿಕರನ್ನು ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಈ ವೇಳೆ ಮಹಿಳೆ ಸೇರಿ ನಾಲ್ವರು ಪ್ರಯಾಣಿಕರು ವಿಶೇಷವಾಗಿ ವಿನ್ಯಾಸಗೊಳಿಸಿದ ಜೀನ್ಸ್‌ ಪ್ಯಾಂಟ್‌, ಟಿ ಶರ್ಟ್‌ನಲ್ಲಿ ಪೇಸ್ಟ್‌ ಮತ್ತು ಪೌಡರ್‌ ರೂಪದಲ್ಲಿ ಚಿನ್ನ ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿರುವುದು ಗೊತ್ತಾಗಿದೆ. ಕೂಡಲೇ ನಾಲ್ವರನ್ನು ವಶಕ್ಕೆ ಪಡೆದು ಚಿನ್ನ ಜಪ್ತಿ ಮಾಡಿದ್ದಾರೆ. ಕಸ್ಟಮ್ಸ್‌ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.