ಪತ್ನಿಯ ಲೈಂಗಿಕ ವಾಂಛೆ ಹಾಗೂ ಆಕೆಯ ವಿಕೃತ ನಡವಳಿಕೆಯಿಂದ ಬೇಸತ್ತ ಪತಿಯೊಬ್ಬ ಆಕೆಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪತ್ನಿ ತನ್ನ ಸ್ನೇಹಿತೆಯರ ಜತೆಗೂ ಕೂಡ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಳು ಎಂದು ಪತಿ ಆರೋಪಿಸಿದ್ದಾರೆ.
ಬೆಂಗಳೂರು : ಪತ್ನಿಯ ಲೈಂಗಿಕ ವಾಂಛೆ ಹಾಗೂ ಆಕೆಯ ವಿಕೃತ ನಡವಳಿಕೆಯಿಂದ ಬೇಸತ್ತ ಪತಿಯೊಬ್ಬ ಆಕೆಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪತ್ನಿ ಕೇವಲ ತನ್ನೊಂದಿಗೆ ಮಾತ್ರವಲ್ಲದೆ, ತನ್ನ ಸ್ನೇಹಿತೆಯರ ಜತೆಗೂ ಕೂಡ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಳು ಎಂದು ಪತಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಮೃತಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಾಗರಬಾವಿ ನಿವಾಸಿಯಾದ 37 ವರ್ಷದ ವ್ಯಕ್ತಿ ನೀಡಿದ ದೂರಿನ ಮೇರೆಗೆ ಪತ್ನಿ ಶಿಲ್ಪಾ, ಆಕೆಯ ತಾಯಿ ಆಶಾ ಪೋಕಲಾ, ತಂದೆ ಮಾಧವ ಕೃಷ್ಣ ಪೋಕಲಾ, ಭಾಮೈದ ಸಾಯಿ ಕೃಷ್ಣ ಪೋಕಲಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದೂರುದಾರರು ಕೆಲ ವರ್ಷಗಳ ಹಿಂದೆ ಶಿಲ್ಪಾ ಎಂಬಾಕೆಯನ್ನು ಮದುವೆಯಾಗಿದ್ದರು. ದಂಪತಿ ಜಕ್ಕೂರಿನಲ್ಲಿ ವಾಸವಾಗಿದ್ದಾರೆ. ಈ ಮಧ್ಯೆ ದೂರುದಾರರ ಅತ್ತೆ ಆಶಾ, ತಮ್ಮ ಪುತ್ರಿ ಶಿಲ್ಪಾಗೆ ತನ್ನೊಂದಿಗೆ ಜಗಳ ಮಾಡುವಂತೆ ಪ್ರಚೋದನೆ ನೀಡುತ್ತಿದ್ದರು. ಅಲ್ಲದೆ, ಪತ್ನಿ ಶಿಲ್ಪಾ ಕೂಡ, ತಾನೂ ಐಷಾರಾಮಿ ಜೀವನ ನಡೆಸಿದವಳು. ನೀನು ಬಡವ, ನಾನು ಶ್ರೀಮಂತರ ಸ್ನೇಹಿತರ ಜತೆ ಕಾಲ ಕಳೆಯುತ್ತೇನೆ. ಮದ್ಯಪಾನ ಮಾಡುತ್ತೇನೆ. ಅದನ್ನು ನೀನು ಕೇಳಬಾರದು ಎಂದೆಲ್ಲ ಹೇಳಿದ್ದಳು. ಬಳಿಕ 2024ರಲ್ಲಿ ಹಿರಿಯ ಸಮ್ಮುಖದಲ್ಲಿ ರಾಜಿ ಸಂಧಾನ ನಡೆದಿತ್ತು.
ಒಡವೆ ನೀಡದ ಪತ್ನಿ:
ಪತ್ನಿಯ ನಂಬಿಕೆಯ ಮೇಲೆ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣಗಳನ್ನು ಆಕೆಗೆ ನೀಡಲಾಗಿತ್ತು. ಆದರೆ ಈಗ ಆ ಒಡವೆಗಳನ್ನು ವಾಪಸ್ ನೀಡದೆ ಪತ್ನಿ ಸತಾಯಿಸುತ್ತಿದ್ದಾಳೆ. ಈ ಚಿನ್ನಾಭರಣಗಳ ಪೈಕಿ ನನ್ನ ತಾಯಿ ಹಾಗೂ ಕುಟುಂಬ ಸದಸ್ಯರ ಒಡವೆಗಳು ಇವೆ ಎಂದು ದೂರುದಾರರು ಆರೋಪಿಸಿದ್ದಾರೆ. ಪತ್ನಿಯ ಕಾಟ ತಾಳಲಾರದೆ ಕೊನೆಗೆ ಪತಿ ದೂರು ದಾಖಲಿಸಿದ್ದಾರೆ. ಪತ್ನಿಯ ಅಶ್ಲೀಲ ಚಾಟ್‌ಗಳು, ವೀಡಿಯೋಗಳು ಹಾಗೂ ಆಕೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಮೃತಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಸ್ವೀಟ್ ಮೆಮೋರಿಸ್ ಹಂಚಿಕೊಳ್ಳಲು ಕಾಟ
ಪತ್ನಿ ಕೇವಲ ತನ್ನೊಂದಿಗೆ ಮಾತ್ರವಲ್ಲದೆ, ತನ್ನ ಸ್ನೇಹಿತೆಯರ ಜತೆಗೂ ಆತ್ಮೀಯತೆಯಿಂದ ಇರುವಂತೆ ಒತ್ತಾಯಿಸುತ್ತಿದ್ದಳು. ಅದಕ್ಕೆ ಆತ ಒಪ್ಪದಿದ್ದಾಗ ಆಕೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಲು ಆರಂಭಿಸಿದ್ದಾಳೆ. ಅಲ್ಲದೆ, ಅಶ್ಲೀಲ ವೀಡಿಯೋಗಳು ಹಾಗೂ ರೆಕಾರ್ಡಿಂಗ್‌ಗಳನ್ನು ನನಗೆ ಕಳುಹಿಸಿ, ಯಾರು ಇಲ್ಲದ ವೇಳೆ ಇದನ್ನು ನೋಡು. ಇದೇ ರೀತಿ ರಾತ್ರಿ ನೀನು ನನಗೆ ಮಾಡಬೇಕು ಎಂದು ಹೇಳುತ್ತಿದ್ದಳು.
ಜತೆಗೆ ನನ್ನ ಮೈ ಕಚ್ಚುತ್ತಿದ್ದಳು ಮತ್ತು ಆಕೆಯ ಸ್ನೇಹಿತೆ ಜತೆ ನಾವೆಲ್ಲರೂ ಸ್ವೀಟ್ ಮೆಮೋರಿಸ್ ಹಂಚಿಕೊಳ್ಳಬೇಕು ಎಂದು ನನ್ನೊಂದಿಗೆ ಪೀಡಿಸುತ್ತಿದ್ದಳು. ಈಕೆಯ ಈ ನಡೆ ತೀವ್ರ ಮುಜುಗರವನ್ನುಂಟು ಮಾಡಿದೆ. ಮದುವೆಯ ನಂತರ ಆಕೆ ತನ್ನ ಹಳೆಯ ಸಂಬಂಧಗಳ ಬಗ್ಗೆಯೂ ಹೇಳಿಕೊಂಡಿದ್ದಳು. ತನ್ನ ಹಳೆಯ ಗೆಳೆಯ-ಗೆಳತಿಯರ ಜತೆ ಸಂಂಬಂಧ ಹೊಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಳು ಎಂದು ದೂರುದಾರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
