ಏರ್ಪೋರ್ಟ್‌ನಲ್ಲಿ ಭರ್ಜರಿ ಬೇಟೆ: ₹30 ಕೋಟಿಯ ಕೊಕೇನ್‌ ಜಪ್ತಿ!

| Published : Jul 15 2024, 01:52 AM IST / Updated: Jul 15 2024, 04:51 AM IST

ಏರ್ಪೋರ್ಟ್‌ನಲ್ಲಿ ಭರ್ಜರಿ ಬೇಟೆ: ₹30 ಕೋಟಿಯ ಕೊಕೇನ್‌ ಜಪ್ತಿ!
Share this Article
  • FB
  • TW
  • Linkdin
  • Email

ಸಾರಾಂಶ

ದೋಹಾದಿಂದ ಬ್ಯಾಗ್‌ನಲ್ಲಿ ಅಡಗಿಸಿ ತರುತ್ತಿದ್ದ ಕೊಕೇನ್‌ ಅನ್ನು ಏರ್‌ಪೋರ್ಟ್‌ನಲ್ಲಿ ಜಪ್ತಿ ಮಾಡಲಾಗಿದೆ. ಇದರ ಮೌಲ್ಯದ ಬರೋಬ್ಬರಿ 30 ಕೋಟಿ.

 ಬೆಂಗಳೂರು :  ವಿದೇಶದಿಂದ ಅಕ್ರಮವಾಗಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದ ವಿದೇಶಿ ಪ್ರಯಾಣಿಕನನ್ನು ಕಂದಾಯ ನಿರ್ದೇಶನಾಲಯದ ಗುಪ್ತಚರ (ಡಿಆರ್‌ಐ) ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಕೀನ್ಯಾದ ಒದಿಹಾಂಬೋ ಮಾರ್ಗನ್‌ ಬೈರನ್‌ ಬಂಧಿತ. ಆರೋಪಿಯಿಂದ 30 ಕೋಟಿ ರು. ಮೌಲ್ಯದ 3 ಕೆ.ಜಿ.ಕೊಕೇನ್‌ ಜಪ್ತಿ ಮಾಡಿದ್ದಾರೆ.

ದೋಹಾದಿಂದ ಇಂಡಿಗೋ 6ಎ 1302- ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆಬಂದಿದ್ದ ಪ್ರಯಾಣಿಕರ ಲಗೇಜ್‌ಗಳನ್ನು ಡಿಆರ್‌ಐ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಕಿನ್ಯಾ ಪ್ರಜೆಯ ಲಗೇಜ್‌ನೊಳಗೆ ಪೇಸ್ಟ್‌ ರೂಪದಲ್ಲಿ 3 ಕೆ.ಜಿ.ಕೊಕೇನ್‌ ಪತ್ತೆಯಾಗಿದೆ.

ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದಿರುವ ಡಿಆರ್‌ಐ ಅಧಿಕಾರಿಗಳು ಕೊಕೇನ್‌ ಜಪ್ತಿ ಮಾಡಿದ್ದಾರೆ. ಆರೋಪಿಯು ವಿದೇಶದಿಂದ ಅಕ್ರಮವಾಗಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಡಿಆರ್‌ಐ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.