ಸಾರಾಂಶ
ಕೆರೆಗಳ ಒತ್ತುವರಿ ತೆರವುಗೊಳಿಸುವ ಸಂಬಂಧ ಬಿಬಿಎಂಪಿ ಸರ್ವೇ ಕಾರ್ಯ ಆರಂಭಿಸಿದ್ದು, ಈವರೆಗೆ 162 ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಳಿಸಿದ್ದು, 92 ಕೆರೆಗಳಲ್ಲಿ ಒತ್ತುವರಿ ಭಾಗವನ್ನು ಗುರುತಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿರುವ ಕೆರೆಗಳ ಒತ್ತುವರಿ ತೆರವುಗೊಳಿಸುವ ಸಂಬಂಧ ಬಿಬಿಎಂಪಿ ಸರ್ವೇ ಕಾರ್ಯ ಆರಂಭಿಸಿದ್ದು, ಈವರೆಗೆ 162 ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಳಿಸಿದ್ದು, 92 ಕೆರೆಗಳಲ್ಲಿ ಒತ್ತುವರಿ ಭಾಗವನ್ನು ಗುರುತಿಸಲಾಗಿದೆ.ನಗರದಲ್ಲಿರುವ 202 ಕೆರೆಗಳ ಪೈಕಿ 19 ಕೆರೆಗಳು ಬಳಕೆಯಲ್ಲಿ ಇಲ್ಲ. 183 ಕೆರೆಗಳು ಬಳಕೆಯಲ್ಲಿವೆ. ಬಿಬಿಎಂಪಿ ವ್ಯಾಪ್ತಿಯ ಸಾಕಷ್ಟು ಕೆರೆಗಳು ಒತ್ತುವರಿ ಆಗಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಸರ್ವೇ ಕಾರ್ಯ ಆರಂಭಿಸಿದ್ದು, ಈವರೆಗೆ 162 ಕೆರೆಗಳ ಸರ್ವೇ ಕಾರ್ಯವನ್ನು ಬಿಬಿಎಂಪಿ ಪೂರ್ಣಗೊಳಿಸಿದ್ದು, ಇನ್ನೂ 40 ಕೆರೆಗಳ ಸರ್ವೇ ಕಾರ್ಯ ಬಾಕಿ ಇದೆ. ಸರ್ವೇ ಕಾರ್ಯ ಪೂರ್ಣಗೊಂಡ 162 ಕೆರೆಗಳ ಪೈಕಿ 92 ಕೆರೆಗಳಲ್ಲಿ ಒತ್ತುವರಿ ಭಾಗವನ್ನು ಗುರುತಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ. ಇನ್ನೂ 70 ಕೆರೆಗಳ ಒತ್ತುವರಿ ಭಾಗ ಗುರುತಿಸುವುದು ಬಾಕಿ ಇದೆ. ಬಿಬಿಎಂಪಿಯ 202 ಕೆರೆಗಳ ಪೈಕಿ 49 ಕೆರೆಗಳಲ್ಲಿ ಬಿಬಿಎಂಪಿಯು ಸೇರಿದಂತೆ ಸರ್ಕಾರ ಹಾಗೂ ಇತರೆ ಸರ್ಕಾರಿ ಇಲಾಖೆಗಳಿಂದ ಒತ್ತುವರಿ ಆಗಿದೆ. ಕೆಲವು ಕೆರೆಗಳಲ್ಲಿ ಒತ್ತುವರಿ ಆಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.