ಕೆಆರ್‌ಎಸ್‌: ಸಂಗೀತ ಕಾರಂಜಿ ವೀಕ್ಷಣೆ ವೇಳೆ ಅಸಭ್ಯ ವರ್ತನೆ - ಕೇರಳಿಗನನ್ನು ಥಳಿಸಿ ಕೊಂದ ಜನ!

| N/A | Published : Apr 07 2025, 05:43 AM IST

man found dead

ಸಾರಾಂಶ

ಪ್ರವಾಸಿತಾಣ ಕೆಆರ್‌ಎಸ್ ಬೃಂದಾವನದಲ್ಲಿ ಶನಿವಾರ ಪ್ರವಾಸಕ್ಕೆ ಬಂದಿದ್ದ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರಿದ ಕೇರಳದ ಪ್ರವಾಸಿಗನಿಗೆ ಸಾರ್ವಜನಿಕರು ಥಳಿಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ನಡೆದಿದೆ.

  ಶ್ರೀರಂಗಪಟ್ಟಣ :  ಪ್ರವಾಸಿತಾಣ ಕೆಆರ್‌ಎಸ್ ಬೃಂದಾವನದಲ್ಲಿ ಶನಿವಾರ ಪ್ರವಾಸಕ್ಕೆ ಬಂದಿದ್ದ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರಿದ ಕೇರಳದ ಪ್ರವಾಸಿಗನಿಗೆ ಸಾರ್ವಜನಿಕರು ಥಳಿಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ನಡೆದಿದೆ.

ಕೇರಳ ಮೂಲದ ಪ್ರವಾಸಿಗ ಜಾರ್ಜ್ ಜೋಸೆಫ್ (45) ಮೃತ ವ್ಯಕ್ತಿ. ಜಾರ್ಜ್‌ ತನ್ನ ಸ್ನೇಹಿತರೊಂದಿಗೆ ಕೇರಳದಿಂದ ಬೃಂದಾವನ ವೀಕ್ಷಣೆಗೆ ಶನಿವಾರ ಆಗಮಿಸಿದ್ದರು. ಸಂಗೀತ ಕಾರಂಜಿ ನೋಡುವಾಗ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರು ಥಳಿಸಿದ್ದಾರೆ. 

ಇದರಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.