ಜ್ಯೂಸ್‌ ಬಾಕ್ಸ್‌ಗಳಲ್ಲಿ ನಕಲಿ ಸಿಗರೆಟ್‌ ಕಳ್ಳ ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದ ಕೇರಳಿಗ ಬಂಧನ

| N/A | Published : Feb 03 2025, 01:16 AM IST / Updated: Feb 03 2025, 04:43 AM IST

ಜ್ಯೂಸ್‌ ಬಾಕ್ಸ್‌ಗಳಲ್ಲಿ ನಕಲಿ ಸಿಗರೆಟ್‌ ಕಳ್ಳ ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದ ಕೇರಳಿಗ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಜ್ಯೂಸ್‌ ಬಾಕ್ಸ್‌ಗಳಲ್ಲಿ ನಕಲಿ ಸಿಗರೆಟ್‌ ಕಳ್ಳ ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಆರೋಪಿಯನ್ನು ಬಂಧಿಸಿರುವ ವಿಲ್ಸನ್‌ಗಾರ್ಡನ್‌ ಠಾಣೆ ಪೊಲೀಸರು, ₹27 ಲಕ್ಷ ಮೌಲ್ಯದ ನಕಲಿ ಸಿಗರೆಟ್‌ ಜಪ್ತಿ ಮಾಡಿದ್ದಾರೆ.

 ಬೆಂಗಳೂರು  : ಜ್ಯೂಸ್‌ ಬಾಕ್ಸ್‌ಗಳಲ್ಲಿ ನಕಲಿ ಸಿಗರೆಟ್‌ ಕಳ್ಳ ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಆರೋಪಿಯನ್ನು ಬಂಧಿಸಿರುವ ವಿಲ್ಸನ್‌ಗಾರ್ಡನ್‌ ಠಾಣೆ ಪೊಲೀಸರು, ₹27 ಲಕ್ಷ ಮೌಲ್ಯದ ನಕಲಿ ಸಿಗರೆಟ್‌ ಜಪ್ತಿ ಮಾಡಿದ್ದಾರೆ.

ಕೇರಳ ಮೂಲದ ಯೂಸೂಫ್‌ (32) ಬಂಧಿತ. ಆರೋಪಿಯು ಐಟಿಸಿ ಕಂಪನಿ ಸಿಗರೆಟ್‌ ನಕಲು ಮಾಡಿ ಕಳಪೆ ಗುಣಮಟ್ಟದ ಸಿಗರೆಟ್‌ ಅನಗರಕ್ಕೆ ತಂದು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು ₹27 ಲಕ್ಷ ಮೌಲ್ಯದ ನಕಲಿ ಸಿಗರೆಟ್‌ಗಳು ಹಾಗೂ ಕೇರಳ ನೋಂದಣಿಯ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಯೂಸೂಫ್‌ ದೆಹಲಿಯಿಂದ ಈ ನಕಲಿ ಸಿಗರೆಟ್‌ಗಳನ್ನು ನಗರಕ್ಕೆ ತರುತ್ತಿದ್ದ. ಜ್ಯೂಸ್‌ ಬಾಕ್ಸ್‌ಗಳಲ್ಲಿ ಈ ನಕಲಿ ಸಿಗರೆಟ್‌ ಪ್ಯಾಕ್‌ಗಳನ್ನು ತುಂಬಿ ನಗರಕ್ಕೆ ತಂದು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.