ದೆಹಲಿಯ ಕಾಶ್ಮೀರ್‌ ಗೇಟ್‌ ಫ್ಲೈ ಓವರ್‌ ಮೇಲೆ ಖಲಿಸ್ತಾನಿ ಪರ ಬರಹಗಳನ್ನು ಗೀಚಿದ್ದ ಎರಡು ತಿಂಗಳ ಹಿಂದಿನ ಘಟನೆಗೆ ಸಂಬಂಧಿಸಿದಂತೆ ಹರ್ಯಾಣ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನವದೆಹಲಿ: ದೆಹಲಿಯ ಕಾಶ್ಮೀರ್‌ ಗೇಟ್‌ ಫ್ಲೈ ಓವರ್‌ ಮೇಲೆ ಖಲಿಸ್ತಾನಿ ಪರ ಬರಹಗಳನ್ನು ಗೀಚಿದ್ದ ಎರಡು ತಿಂಗಳ ಹಿಂದಿನ ಘಟನೆಗೆ ಸಂಬಂಧಿಸಿದಂತೆ ಹರ್ಯಾಣ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹರ್ಯಾಣದ ಕುರುಕ್ಷೇತ್ರ ನಿವಾಸಿ ಮಾಲಕ್ ಸಿಂಗ್‌ ಅಲಿಯಾಸ್‌ ಮಲಿಕ್‌ (38) ಎಂಬಾತನನ್ನು ದೆಹಲಿ ಪೊಲೀಸರ ವಿಶೇಷ ತಂಡವು ಬಂಧಿಸಿದ್ದು, ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ನಿಷೇಧಿತ ಸಿಖ್ ಫಾರ್‌ ಜಸ್ಟೀಸ್ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಆದೇಶದ ಮೇರೆಗೆ ಈತ ದೆಹಲಿ ಸೇರಿದಂತೆ ದೇಶದ ಇತರೆಡೆ ಖಲಿಸ್ತಾನಿ ಪರ ಬರಹಗಳನ್ನು ಗೀಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೆ.27 ರಂದು ದೆಹಲಿಯ ಅನೇಕ ಕಡೆ ನಿಷೇಧಿತ ಖಲಿಸ್ತಾನಿ ಸಂಘಟನೆಯ ಪರ ಬರಹ ಗೀಚಲಾಗಿತ್ತು.