ಸಾರಾಂಶ
ಹಲಗೂರು : ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಬಸ್ ಡಿಕ್ಕಿಯಾಗಿ ವೃದ್ಧ ಸಾವನ್ನಪ್ಪಿರುವ ಘಟನೆ ಸಾಮಂದಿಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಓದು ಪುಟ್ಟೇಗೌಡರ ಪುತ್ರ ಮುದ್ದೇಗೌಡ ಉರುಫ್ ಸಣ್ಣೇಗೌಡ (85) ಮೃತಪಟ್ಟವರು.
ಕಾರ್ಯ ನಿಮಿತ್ತ ಸ್ವಗ್ರಾಮದಿಂದ ಚನ್ನಪಟ್ಟಣ ತಾಲೂಕು ಸಾವಂದಿಪುರ ರಸ್ತೆಯ ಬದಿ ನಡೆದು ಹೋಗುತ್ತಿದ್ದಾಗ ಹಲಗೂರು ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಸಣ್ಣೇಗೌಡ ಅವರನ್ನು ಕೆ.ಎಂ.ದೊಡ್ಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಕುಂಭಮೇಳದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ಅರ್ಚಕ ಅಪಘಾತದಲ್ಲಿ ಸಾವು
ಶ್ರೀರಂಗಪಟ್ಟಣ: ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗವಹಿಸಿ ಹಿಂದಿರುಗುವಾಗ ವಾರಣಾಸಿ ಬಳಿ ಕಾರು ಅಪಘಾತವಾಗಿ ತಾಲೂಕಿನ ಹೊಸಕನ್ನಂಬಾಡಿ ದೇವಾಲಯದ ಅರ್ಚಕ ಮೃತಪಟ್ಟಿರುವ ಘಟನೆ ನಡೆದಿದೆ.
ಕೆಆರ್‌ಎಸ್ ಹಿನ್ನಿರಿನ ಬಳಿಯ ಪ್ರಸಿದ್ದ ಶ್ರೀವೇಣುಗೋಪಾಲ ದೇವಾಲಯದ ಎರಡನೇ ಅರ್ಚಕ ಎಸ್.ಪಿ.ರಾಮಕೃಷ್ಣ ಶರ್ಮ(31) ಮೃತಪಟ್ಟವರು.
ವಾರಣಾಸಿಯ ಕಾಶಿ ಬಳಿ ಜ.26ರ ಸಂಜೆ ನಡೆದ ಕಾರು ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಅಪಘತದಲ್ಲಿ ಕಾರಿನಲ್ಲಿದ್ದ ಬೆಂಗಳೂರು ಮೂಲದ ನಿವಾಸಿ ಎಸ್.ಕೆ ಪ್ರಭಾಕರ ಶಾಸ್ತ್ರಿಯವರ ಪುತ್ರ ಎಸ್.ಪಿ.ರಾಮಕೃಷ್ಣ ಶರ್ಮ ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡವರನ್ನು ಕಾಶಿ ಬಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಜ.27ರಂದು ಸಾವನಪ್ಪಿದ್ದು ಇವರ ಅಂತ್ಯಕ್ರಿಯೆ ಕಾಶಿಯಲ್ಲಿಯೇ ನೆರವೇರಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.