ಸಾರಾಂಶ
ಜಮ್ಮು ಮತ್ತು ಕಾಶ್ಮೀರ ಮೂಲದ ಮೂರು ನಕಲಿ ವ್ಯಾಪಾರಿ ಸಂಸ್ಥೆಗಳ ಹೆಸರಿನಲ್ಲಿ ಮದ್ದೂರು ಮೂಲದ ವ್ಯಕ್ತಿಗೆ ಲಾಭಾಂಶದ ಆಸೆ ತೋರಿಸಿ ಆನ್‌ಲೈನ್ ಮೂಲಕ ಲಕ್ಷಾಂತರ ರು. ದೋಚಿ ಪಂಗನಾಮ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮದ್ದೂರು : ಜಮ್ಮು ಮತ್ತು ಕಾಶ್ಮೀರ ಮೂಲದ ಮೂರು ನಕಲಿ ವ್ಯಾಪಾರಿ ಸಂಸ್ಥೆಗಳ ಹೆಸರಿನಲ್ಲಿ ಮದ್ದೂರು ಮೂಲದ ವ್ಯಕ್ತಿಗೆ ಲಾಭಾಂಶದ ಆಸೆ ತೋರಿಸಿ ಆನ್‌ಲೈನ್ ಮೂಲಕ ಲಕ್ಷಾಂತರ ರು. ದೋಚಿ ಪಂಗನಾಮ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕು ಸಿ.ಎ.ಕೆರೆ ಹೋಬಳಿಯ ಮಡೇನಹಳ್ಳಿ ಸಿದ್ದಲಿಂಗಸ್ವಾಮಿ ಪುತ್ರ ಎಂ.ಎಸ್.ಯತೀಶ್ ಲಾಭಾಂಶದ ಆಸೆಗೆ ಬಿದ್ದು 7,45,100 ರು. ಕಳೆದುಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮೂಲದ ಎಸ್.ಕೆ.ಕ್ರಾಕರಿ, ಶಿವ ಕಸ್ಟ್ರಕ್ಷನ್ಸ್, ಎಸ್.ಎನ್.ಇಂಟರ್ ನ್ಯಾಷನಲ್ ಎಂಬ ಅಪರಿಚಿತ ಕಂಪನಿಗಳು ತಮ್ಮ ಕಂಪನಿ ಹೆಸರಿನಲ್ಲಿ ಹಣ ಹೂಡಿಕೆ ಮಾಡಿದರೆ ಶೇಕಡ 60ರಷ್ಟು ಲಾಭಾಂಶ ನೀಡುವುದಾಗಿ ಆನ್‌ಲೈನ್‌ನಲ್ಲಿ ಘೋಷಣೆ ಮಾಡಿ ಕಳೆದ ಜುಲೈ 9 ರಿಂದ ಆಗಸ್ಟ್ 21ರವರೆಗೆ ತಮ್ಮ ಖಾತೆಯಲ್ಲಿದ್ದ 7,45, 100 ರು.ಗಳನ್ನು ಆನ್ ಲೈನ್ ಮೂಲಕ ದೋಚಲಾಗಿದೆ ಎಂದು ಎಂ.ಎಸ್.ಯತೀಶ್ ಮಂಡ್ಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಪೊಲೀಸರು ಬಿಎನ್ಎಸ್ ಕಾಯ್ದೆ 66 ಸಿ, 66 ಡಿ ಮತ್ತು ಆದಾಯ ತೆರಿಗೆ ಕಾಯ್ದೆ 318 ಹಾಗೂ 19ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಪರಿಚಿತ ವೃದ್ಧನ ಶವ ಪತ್ತೆ
ಮದ್ದೂರು: ಪಟ್ಟಣದ ಶಾಂತಿ ವೈನ್ ಸ್ಟೋರ್ ಬಳಿ ಸುಮಾರು 60 ರಿಂದ 65 ವರ್ಷ ವಯಸ್ಸಿನ ಅಪರಿಚಿತ ವೃದ್ಧನ ಶವ ಶನಿವಾರ ಪತ್ತೆಯಾಗಿದೆ. ಮೃತರ ಎಡಗೈನಲ್ಲಿ ರುಕ್ಕಮ್ಮ ಹಾಗೂ ಬಲಗೈನಲ್ಲಿ ಗಾಯತ್ರಿ ಎಂಬ ಹಸಿರು ಹಚ್ಚೆ ಇದೆ. ಈತನ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.