ಸಾರಾಂಶ
ಖಿನ್ನತೆಯಲ್ಲಿದ್ದ ಈಕೆ ಶನಿವಾರ ರಾತ್ರಿ ಮನೆಯಲ್ಲಿ ಮೂರು ವರ್ಷದ ಪುತ್ರ ದೀಕ್ಷಿತ್‌ಗೆ ನೇಣು ಹಾಕಿದ್ದಾಳೆ. ಪುತ್ರಿ ಧನುಶ್ರೀಗೆ ಕೂಡ ನೇಣು ಹಾಕಲು ಮುಂದಾಗಿದ್ದಾಳೆ. ಧನುಶ್ರೀ ಭಯದಿಂದ ಮನೆಯಿಂದ ಹೊರಗಡೆ ಓಡಿ ಹೋಗಿದೆ. ತದನಂತರ ತಾನೂ ಕೂಡ ನೇಣು ಬಿಗಿದುಕೊಂಡು ಮೃತಳಾಗಿದ್ದಾಳೆ
ಕಿಕ್ಕೇರಿ : ಕೌಟುಂಬಿಕ ಕಲಹದಿಂದ ತನ್ನ ಮಗನೊಂದಿಗೆ ತಾಯಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಕ್ಕನಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಗ್ರಾಮದ ಪುಟ್ಟಸ್ವಾಮಿ ಪತ್ನಿ ಶಿಲ್ಪಾ (27) ಹಾಗೂ ಪುತ್ರ ದೀಕ್ಷಿತ್ (3) ಮೃತಪಟ್ಟವರು.
ಸಂತೆಬಾಚಹಳ್ಳಿ ಹೋಬಳಿಯ ಹಲಸನಹಳ್ಳಿ ಕಾಂತರಾಜು ಪುತ್ರಿ ಶಿಲ್ಪಾಳನ್ನು ಜಕ್ಕನಹಳ್ಳಿ ಮರಿಹುಚ್ಚಯ್ಯ ಹಾಗೂ ಕಾಳಮ್ಮ ದಂಪತಿ ಪುತ್ರ ಪುಟ್ಟಸ್ವಾಮಿಗೆ ವಿವಾಹ ಮಾಡಿಕೊಡಲಾಗಿತ್ತು. ಆರಂಭದಲ್ಲಿ ಅನೋನ್ಯವಾಗಿದ್ದ ಕುಟುಂಬದಲ್ಲಿ ಈಚೆಗೆ ಕೌಟುಂಬಿಕ ಕಲಹ ಏರ್ಪಟಿತ್ತು. ಆಗಿಂದಾಗ್ಗೆ ಗಲಾಟೆ ನಡೆದು ರಾಜೀ ಪಂಚಾಯ್ತಿ ಕೂಡ ನಡೆದಿತ್ತು.
ಖಿನ್ನತೆಯಲ್ಲಿದ್ದ ಈಕೆ ಶನಿವಾರ ರಾತ್ರಿ ಮನೆಯಲ್ಲಿ ಮೂರು ವರ್ಷದ ಪುತ್ರ ದೀಕ್ಷಿತ್‌ಗೆ ನೇಣು ಹಾಕಿದ್ದಾಳೆ. ಪುತ್ರಿ ಧನುಶ್ರೀಗೆ ಕೂಡ ನೇಣು ಹಾಕಲು ಮುಂದಾಗಿದ್ದಾಳೆ. ಧನುಶ್ರೀ ಭಯದಿಂದ ಮನೆಯಿಂದ ಹೊರಗಡೆ ಓಡಿ ಹೋಗಿದೆ.
ತದನಂತರ ತಾನೂ ಕೂಡ ನೇಣು ಬಿಗಿದುಕೊಂಡು ಮೃತಳಾಗಿದ್ದಾಳೆ. ಮನೆ ಹೊರಗಡೆ ಇದ್ದ ಕುಟುಂಬದವರು ಮನೆಯೊಳಗೆ ಹೋಗಿ ನೋಡಿದಾಗ ಶಿಲ್ಪಾ, ದೀಕ್ಷಿತ್ ನೇಣು ಬಿಗಿದಿರುವ ಸ್ಥಿತಿಯಲ್ಲಿ ಸಾವಿಗೀಡಾಗಿರುವುದನ್ನು ಕಂಡಿದ್ದಾರೆ.
ಮೃತಳ ತಂದೆ ಕಾಂತರಾಜು ನೀಡಿದ ದೂರಿನ ಮೇರೆ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ. ಮೃತ ಶವಗಳನ್ನು ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಂಚಾನಾಮೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ನಾಗಯ್ಯ ನಿಧನ
ಶ್ರೀರಂಗಪಟ್ಟಣ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಸಹಾಯಕ ಬಸವರಾಜು ಅವರ ತಂದೆ ನಾಗಯ್ಯ (85) ವಯೋಸಹಜ ಕಾಯಿಲೆಯಿಂದ ಭಾನುವಾರ ಬೆಳಗ್ಗೆ ನಿಧನರಾದರು. ಮೃತರಿಗೆ ಬಸವರಾಜು ಸೇರಿದಂತೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಭಾನುವಾರ ಸಂಜೆ ಸ್ವಗ್ರಾಮ ಪಾಲಹಳ್ಳಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿಸಲಾಯಿತು.