ವಿಶ್ವಕಪ್‌ ವೇಳೆ ದಾಳಿ ಬೆದರಿಕೆ: ಪನ್ನುನ್‌ ವಿರುದ್ಧ ಎನ್‌ಐಎ ಕೇಸ್‌

| Published : Nov 21 2023, 12:45 AM IST

ಸಾರಾಂಶ

ನವದೆಹಲಿ: ಏರ್‌ ಇಂಡಿಯಾ ಮತ್ತು ಅಹಮದಾಬಾದ್‌ನ ಮೋದಿ ಕ್ರೀಡಾಂಗಣದ ಮೇಲೆ ನ.19 ರಂದು ದಾಳಿ ಮಾಡುವುದಾಗಿ ಭಯೋತ್ಪಾದಕ ಬೆದರಿಕೆ ಹಾಕಿದ್ದ ಸಿಖ್‌ ಫಾರ್‌ ಜಸ್ಟೀಸ್ ಸಂಘಟನೆಯ ನಾಯಕ ಗುರುಪತ್ವಂತ್‌ ಸಿಂಗ್ ಪನ್ನುನ್‌ ವಿರುದ್ಧ ಎನ್‌ಐಎ (ಕೇಂದ್ರೀಯ ತನಿಖಾ ದಳ), ಉಗ್ರವಾದಕ್ಕೆ ಸಂಬಂಧಿಸಿದ ಪ್ರಕರಣ ದಾಖಲಿಸಿದೆ.

‘ಸಿಖ್ಖರು ನ.19 ರಂದು ಏರ್‌ ಇಂಡಿಯಾ ವಿಮಾನ ಹತ್ತಬೇಡಿ. ಅಂದು ನಾವು ಏರ್‌ ಇಂಡಿಯಾ ಮೇಲೆ ದಾಳಿ ಮಾಡುತ್ತೇವೆ’ ಎಂದು ನ.4 ರಂದು ಪನ್ನುನ್‌ ವಿಡಿಯೋ ಬಿಡುಗಡೆ ಮಾಡಿದ್ದ. ಆದರೆ ಅಂದು ಯಾವುದೇ ದಾಳಿ ನಡೆದಿಲ್ಲ. ಇದೀಗ ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಯಡಿ ಪನ್ನುನ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.