ಸಾರಾಂಶ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ನಟ ದರ್ಶನ್‌ರವರ ಪ್ರಿಯತಮೆ ಪವಿತ್ರಾಗೌಡ ಈಗ ವಿಚಾರಣಾಧೀನ ಕೈದಿ ನಂ.6024 ಆಗಿದ್ದಾರೆ.
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ನಟ ದರ್ಶನ್‌ರವರ ಪ್ರಿಯತಮೆ ಪವಿತ್ರಾಗೌಡ ಈಗ ವಿಚಾರಣಾಧೀನ ಕೈದಿ ನಂ.6024 ಆಗಿದ್ದಾರೆ.
ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಶುಕ್ರವಾರ ಜೈಲಿಗೆ ಆಗಮಿಸಿದ್ದ ಪವಿತ್ರಾ ಸೇರಿದಂತೆ 13 ಆರೋಪಿಗಳಿಗೆ ಕಾರಾಗೃಹ ಅಧಿಕಾರಿಗಳು ಯುಟಿಪಿ ನಂಬರ್ ನೀಡಿದ್ದಾರೆ. ಕಾರಾಗೃಹದ ಮಹಿಳಾ ಕೈದಿಗಳ ವಿಭಾಗದಲ್ಲಿ ಪವಿತ್ರಾಳಿಗೆ ಸೆಲ್ ನೀಡಲಾಗಿದ್ದು, ಇನ್ನುಳಿದ ಆರೋಪಿಗಳು ವಿಶೇಷ ಭದ್ರತಾ ವಿಭಾಗದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಎಲ್ಲ ಆರೋಪಿಗಳಿಗೆ ಜೈಲಿಗೆ ಆಗಮಿಸಿದ ಕೂಡಲೇ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ನಡೆಸಿ ಸೆಲ್ ಅನ್ನು ಕಾರಾಗೃಹದ ಅಧಿಕಾರಿಗಳು ವಿತರಿಸಿದ್ದಾರೆ.