ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ಫೋನ್‌ ಹ್ಯಾಕ್‌, ಹಣ ಲೂಟಿ

| Published : Oct 23 2024, 01:56 AM IST

ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ಫೋನ್‌ ಹ್ಯಾಕ್‌, ಹಣ ಲೂಟಿ
Share this Article
  • FB
  • TW
  • Linkdin
  • Email

ಸಾರಾಂಶ

ಲಾಂಚ್‌ ಅ್ಯಪ್‌ ಡೌನ್‌ಲೋಡ್‌ ಮಾಡಿದ ಮಹಿಳೆಯ ಮೊಬೈಲನ್ನು ಹ್ಯಾಕ್‌ ಮಾಡಿ ಖಾತೆಯಲ್ಲಿದ್ದ 87 ಸಾವಿರವನ್ನು ದೋಚಲಾಗಿದೆ.

ನವದೆಹಲಿ: ಬೆಂಗಳೂರು ವಿಮಾನ ನಿಲ್ದಾಣದ ಲಾಂಜ್‌ನಲ್ಲಿ (ವಿಶೇಷ ಪ್ರವೇಶದೊಂದಿಗೆ ಪ್ರಯಾಣಿಕರು ಕಾಯುವ ಸ್ಥಳ) ಲಾಂಜ್‌ ಪಾಸ್‌ ಎಂಬ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ಮಹಿಳೆಯೊಬ್ಬರಿಗೆ, ಅವರ ಫೋನ್‌ ಹ್ಯಾಕ್‌ ಮಾಡಿ ₹87,000 ವಂಚಿಸಲಾಗಿದೆ.

ಲಾಂಜ್‌ ಪ್ರವೇಶಿಸುವ ಮುನ್ನ ಭದ್ರತೆಯ ಉದ್ದೇಶಕ್ಕಾಗಿ ‘ಲಾಂಜ್‌ ಪಾಸ್‌’ ಎಂಬ ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿ ಮುಖ ಸ್ಕ್ಯಾನ್‌ ಮಾಡುವಂತೆ ಅಲ್ಲಿನ ಸಿಬ್ಬಂದಿ ಸೂಚಿಸಿದ್ದು, ಆಕೆ ಅಂತೆಯೇ ಮಾಡಿದ್ದಾರೆ. ಆದರೆ ಬಳಿಕ ಅವರು ಲಾಂಜ್‌ ಬಳಸಲೇ ಇಲ್ಲ. ಕೇವಲ ಸ್ಟಾರ್‌ ಬಕ್ಸ್‌ಗೆ ಹೋಗಿ ಕಾಫಿ ಮಾತ್ರ ಕುಡಿದಿದ್ದಾರೆ.

ಅದಾದ ಕೆಲ ಹೊತ್ತಿನ ಬಳಿಕ ಆಕೆಗೆ ಯಾವುದೇ ಫೋನ್‌ ಕರೆಗಳನ್ನು ಸ್ವೀಕರಿಸಲು ಆಗಲಿಲ್ಲ. ಮೊದಮೊದಲು ನೆಟ್‌ವರ್ಕ್‌ ಸಮಸ್ಯೆ ಇರಬಹುದು ಎಂದುಕೊಂಡರೂ, ನಂತರ ಅಪರಿಚಿತರು ಕರೆಗಳನ್ನು ಸ್ವೀಕರಿಸುತ್ತಿದ್ದುದು ಆಕೆಯ ಗಮನಕ್ಕೆ ಬಂದಿದೆ. ಸಾಲದ್ದಕ್ಕೆ, ಆಕೆಯ ಕ್ರೆಡಿಟ್‌ ಕಾರ್ಡ್‌ನಿಂದ ₹87,000 ಅನ್ನು ಅಜ್ಞಾತ ಫೋನ್‌ ಪೇ ಖಾತೆಗೆ ವರ್ಗಾಯಿಸಲಾಗಿದೆ.

ಕೂಡಲೇ ಸೈಬರ್ ಅಪರಾಧ ಇಲಾಖೆಯನ್ನು ಸಂಪರ್ಕಿಸಿದ ಮಹಿಳೆ, ಲಾಂಜ್‌ ಪಾಸ್‌ ಆ್ಯಪ್‌ ಡೌನ್‌ಲೋಡ್‌ ಬಳಿಕ ತನ್ನ ಫೋನ್‌ ಅನ್ನು ಸೈಬರ್‌ ಅಪರಾಧಿಗಳು ಹ್ಯಾಕ್‌ ಮಾಡಿದ್ದಾರೆ. ಅದರಿಂದಲೇ ಕಾಲ್‌ಗಳನ್ನು ಬೇರೆಡೆ ವರ್ಗಾಯಿಸಿ ಹಾಗೂ ಒಟಿಪಿ ಬಳಸಿ ಹಣ ಲಪಟಾಯಿಸಿದ್ದಾರೆ ಎಂದು ದೂರಿದ್ದಾರೆ ಹಾಗೂ ತನ್ನ ಕ್ರೆಡಿಟ್ ಕಾರ್ಡ್‌ ಬ್ಲಾಕ್‌ ಮಾಡುವಂತೆ ಬ್ಯಾಂಕ್‌ಗೂ ಸೂಚಿಸಿದ್ದಾರೆ.