ಸಾರಾಂಶ
ವರ್ಷಾರಂಭದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಹಿಂಡನ್‌ಬರ್ಗ್ ವರದಿಯಲ್ಲಿ ಅದಾನಿ ಸಮೂಹದ ಮೇಲೆ ಕೇಳಿ ಬಂದಿದ್ದ ಆರೋಪದ ವಿಚಾರಣೆಯನ್ನು ಸೆಬಿ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಲಾಗಿದೆ
ನವದೆಹಲಿ: ವರ್ಷಾರಂಭದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಹಿಂಡನ್‌ಬರ್ಗ್ ವರದಿಯಲ್ಲಿ ಅದಾನಿ ಸಮೂಹದ ಮೇಲೆ ಕೇಳಿ ಬಂದಿದ್ದ ಆರೋಪದ ವಿಚಾರಣೆಯನ್ನು ಸೆಬಿ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಲಾಗಿದೆ. ತನಿಖೆ ಪೂರ್ಣಕ್ಕೆ ಸೆಬಿಗೆ ಆ.14ರ ಗಡುವು ನೀಡಿದ್ದರೂ ಅದು ಇನ್ನೂ ತನ್ನ ಅಂತಿಮ ವರದಿ ಸಲ್ಲಿಸಿಲ್ಲ. ಹೀಗಾಗಿ ಸೆಬಿ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸುವಂತೆ ಕೋರಿ ವಿಶಾಲ್ ತಿವಾರಿ ಎಂಬುವವರು ಮನವಿ ಮಾಡಿದ್ದಾರೆ. ಅದಾನಿ ಸಮೂಹದ ವಿರುದ್ಧದ 24 ಆರೋಪದ ಪೈಕಿ 22ರ ವಿಚಾರಣೆ ಪೂರ್ಣಗೊಳಿಸಿರುವುದಾಗಿ ಸೆಬಿ ಆ.25ರಂದು ತಿಳಿಸಿತ್ತು.