ಇನ್ಮುಂದೆ ಸಂಚಾರ ನಿಯಮ ಉಲ್ಲಂಘನೆ ವರದಿಗೆ ‘ಬಿಟಿಪಿ ಅಸ್ತ್ರಂ’ ಆ್ಯಪ್‌ ಬಳಸಿ : ಮನವಿ

| N/A | Published : Mar 28 2025, 01:15 AM IST / Updated: Mar 28 2025, 03:06 AM IST

ಸಾರಾಂಶ

ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘನೆಗಳನ್ನು ವರದಿ ಮಾಡಲು ಇನ್ನು ಮುಂದೆ ನಗರ ಸಂಚಾರ ಪೊಲೀಸರು ಅಭಿವೃದ್ಧಿಪಡಿಸಿರುವ ‘ಬಿಟಿಪಿ-ಅಸ್ತ್ರಂ’(BTP-ASTraM) ಆ್ಯಪ್‌ ಬಳಸುವಂತೆ ಮನವಿ ಮಾಡಿದ್ದಾರೆ.

 ಬೆಂಗಳೂರು :  ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘನೆಗಳನ್ನು ವರದಿ ಮಾಡಲು ಇನ್ನು ಮುಂದೆ ನಗರ ಸಂಚಾರ ಪೊಲೀಸರು ಅಭಿವೃದ್ಧಿಪಡಿಸಿರುವ ‘ಬಿಟಿಪಿ-ಅಸ್ತ್ರಂ’(BTP-ASTraM) ಆ್ಯಪ್‌ ಬಳಸುವಂತೆ ಮನವಿ ಮಾಡಿದ್ದಾರೆ.

ಈ ಹಿಂದೆ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳನ್ನು ವರದಿ ಮಾಡಲು ಅನುಕೂಲವಾಗುವಂತೆ ‘ಐ ಚೇಂಜ್ ಮೈ ಸಿಟಿ’ ಮತ್ತು ‘ಪಬ್ಲಿಕ್‌ ಐ’ ಆ್ಯಪ್‌ ಅಭಿವೃದ್ಧಿಪಡಿಸಿತ್ತು. ಆದರೆ, ನಗರ ಸಂಚಾರ ಪೊಲೀಸ್‌ ವಿಭಾಗವು ಈ ಆ್ಯಪ್‌ಗಳನ್ನು ಮೇಲ್ವಿಚಾರಣೆ ನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಆ್ಯಪ್‌ ಬಳಕೆ ತೆಗೆದು ಹಾಕಲಾಗಿದೆ.

ಇದೀಗ ಹೊಸದಾಗಿ ಬಿಟಿಪಿ-ಅಸ್ತ್ರಂ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಈ ನೂತನ ಆ್ಯಪ್‌ ಮುಖಾಂತರ ಸಂಚಾರ ನಿಯಮ ಉಲ್ಲಂಘನೆ ವರದಿ, ನೈಜ ಸಮಯದ ಸಂಚಾರ ದಟ್ಟಣೆ ಮಾಹಿತಿ ಹಾಗೂ ದಂಡ ಪಾವತಿಸಬಹುದಾಗಿದೆ. ಈ ಬಿಟಿಪಿ ಅಸ್ತ್ರಂ ಆ್ಯಪ್‌ ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಆ್ಯಪ್‌ ಸ್ಟೋರ್‌ ಎರಡರಲ್ಲೂ ಲಭ್ಯವಿದೆ. ಸಾರ್ವಜನಿಕರು ಡೌನ್‌ಲೋಡ್‌ ಮಾಡಿಕೊಂಡು ಬಳಸುವಂತೆ ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.