ರಸ್ತೆ ಸಾರಿಗೆ ಬಸ್ ಡಿಕ್ಕಿ: ತಮಿಳುನಾಡು ಮೂಲದ ವೃದ್ಧ ಸಾವು

| Published : Feb 09 2024, 01:45 AM IST

ರಸ್ತೆ ಸಾರಿಗೆ ಬಸ್ ಡಿಕ್ಕಿ: ತಮಿಳುನಾಡು ಮೂಲದ ವೃದ್ಧ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು- ಮೈಸೂರು ಹಳೆ ಹೆದ್ದಾರಿಯ ಮದ್ದೂರು ಟಿಫಾನಿಸ್ ಹೋಟೆಲ್ ಬಳಿ ರಸ್ತೆ ದಾಟುತ್ತಿದ್ದ ಕೆಂಪಸಿದ್ದನಿಗೆ ವೇಗವಾಗಿ ಬಂದ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಮದ್ದೂರುಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿ ತಮಿಳುನಾಡು ಮೂಲದ ವೃದ್ಧ ಮೃತಪಟ್ಟಿರುವ ಘಟನೆ ಪಟ್ಟಣದ ಶಿವಪುರದಲ್ಲಿ ಬುಧವಾರ ರಾತ್ರಿ ಜರುಗಿದೆ. ತಮಿಳುನಾಡು ಈರೋಡ್ ಜಿಲ್ಲೆ ಬರಗೂರು ಬಜ್ಜರಪಾಳ್ಯದ ಕೆಂಪಸಿದ್ಧ (60) ಮೃತಪಟ್ಟ ವ್ಯಕ್ತಿ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಈತನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಹಸುನೀಗಿದ್ದಾನೆ. ಬೆಂಗಳೂರು- ಮೈಸೂರು ಹಳೆ ಹೆದ್ದಾರಿಯ ಮದ್ದೂರು ಟಿಫಾನಿಸ್ ಹೋಟೆಲ್ ಬಳಿ ರಸ್ತೆ ದಾಟುತ್ತಿದ್ದ ಕೆಂಪಸಿದ್ದನಿಗೆ ವೇಗವಾಗಿ ಬಂದ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿ ಮೇಲೆ ಹಲ್ಲೆ ಇಬ್ಬರು ಆರೋಪಿಗಳಿಗೆ 2 ವರ್ಷ ಸಜೆ, 15 ಸಾವಿರ ದಂಡ

ಮದ್ದೂರು:ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳಿಗೆ ಪಟ್ಟಣದ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಲಯ ಎರಡು ವರ್ಷ ಸಜೆ ಹಾಗೂ 15 ಸಾವಿರ ರು. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.ತಾಲೂಕಿನ ಬೆಸೆಗರಹಳ್ಳಿ ಬಿ.ಎಂ.ಜಗದೀಶ ಹಾಗೂ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹೊಂಬಾಳಮ್ಮನಪೇಟೆ ಗ್ರಾಮದ ರಂಗನಾಥ್ ಅಲಿಯಾಸ್ ಚೆಲ್ಲಿ ಶಿಕ್ಷೆಗಳಾದ ಆರೋಪಿಗಳು.ಬೆಸಗರಹಳ್ಳಿಯಲ್ಲಿ ಕಳೆದ 2016ರ ಜುಲೈ 1ರಂದು ಲಾರಿ ನಿಲ್ಲಿಸುವ ವಿಚಾರದಲ್ಲಿ ಇಬ್ಬರು ಆರೋಪಿಗಳು ಗ್ರಾಮದ ಚಂದನ್ ಮೇಲೆ ಕಲ್ಲು ಹಾಗೂ ಬ್ಲೇಡ್ ನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಈ ಸಂಬಂಧ ಚಂದನ್ ನೀಡಿದ ದೂರಿನ ಆಧಾರದ ಮೇಲೆ ಅಂದಿನ ಬೆಸಗರಹಳ್ಳಿ ಠಾಣೆ ಪಿಎಸ್ಐ ಎಂ.ಮೋಹನ್ ಕುಮಾರ್ ಪ್ರಕರಣ ದಾಖಲೆ ಮಾಡಿಕೊಂಡು ಆರೋಪಿಗಳು ವಿರುದ್ಧ ಐಪಿಸಿ 504, 323, 324, 226, 506 ಹಾಗೂ 34ರ ಅನ್ವಯ ಪ್ರಕರಣ ದಾಖಲೆ ಮಾಡಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.10 ವರ್ಷಗಳ ಕಾಲ ನಿರಂತರವಾಗಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ. ಪ್ರಿಯಾಂಕ ಆರೋಪಿಗಳಿಗೆ ಎರಡು ವರ್ಷ ಸಜೆ ಹಾಗೂ 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ಗಾಯಾಳು ಚಂದನ್ ಅವರಿಗೆ ಪರಿಹಾರ ರೂಪದಲ್ಲಿ ಪಾವತಿ ಮಾಡುವಂತೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಾಶುಕ್ಯೂಷನ್ ಪರ ಸಹಾಯಕ ಸರ್ಕಾರಿ ಅಭಿಯೋಜಕರಾದ ಎಂ.ಪುಷ್ಪಲತಾ ವಾದ ಮಂಡಿಸಿದ್ದರು.