ಲೈಂಗಿಕ ಹಲ್ಲೆ : ಅಪರಾಧಿಗೆ 8 ವರ್ಷ ಸಜೆ, 50 ಸಾವಿರ ರು. ದಂಡ

| N/A | Published : May 04 2025, 01:34 AM IST / Updated: May 04 2025, 05:34 AM IST

ಸಾರಾಂಶ

ಬಾಲಕಿಯೊಬ್ಬಳ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಅಪರಾಧಿಗೆ ಮಂಡ್ಯದ ಪೋಕ್ಸೋ ವಿಶೇಷ ನ್ಯಾಯಾಲಯ ೮ ವರ್ಷ ಸಜೆ ಮತ್ತು ೫೦ ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.

 ಮಂಡ್ಯ : ಬಾಲಕಿಯೊಬ್ಬಳ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಅಪರಾಧಿಗೆ ಮಂಡ್ಯದ ಪೋಕ್ಸೋ ವಿಶೇಷ ನ್ಯಾಯಾಲಯ 8 ವರ್ಷ ಸಜೆ ಮತ್ತು50 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.

ಕೆ.ಆರ್.ಪೇಟೆ ತಾಲೂಕು ಶ್ರವಣಹಳ್ಳಿ ಗ್ರಾಮದ ರಾಮಕೃಷ್ಣ (34) ಶಿಕ್ಷೆಗೊಳಗಾದ ಅಪರಾಧಿ. ಈತ ಆರು ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿ ತೀವ್ರತರವಾದ ಲೈಂಗಿಕ ಹಲ್ಲೆ ನಡೆಸಿದ್ದನು. ಈತನ ವಿರುದ್ಧ ಪೋಕ್ಸೊ ಕಾಯ್ದೆ ದಾಖಲಿಸಿ ಅಂದಿನ ಕಿಕ್ಕೇರಿ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ದಲಿಂಗ ಬಾನಸಿ ತನಿಖೆ ನಡೆಸಿದ್ದರು. ನಂತರ ಸಬ್‌ ಇನ್ಸ್‌ಪೆಕ್ಟರ್ ರೇವತಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳಿಂದ ಆರೋಪಿ ಎಸಗಿದ ಕೃತ್ಯ ಸಾಬೀತಾಗಿದ್ದರಿಂದ ಪೋಕ್ಸೋ ಕಾಯಿದೆ ಕಲಂ 363  354 ಎ), ಐಪಿಸಿ ಹಾಗೂ ಕಲಂ-10ರ ಪೋಕ್ಸೋ ಕಾಯಿದೆ ಅಪರಾಧಗಳಿಗೆ ಕಲಂ 363 ಐಪಿಸಿಗೆ 3 ವರ್ಷಗಳ ಸಾದಾ ಸಜೆ, 1 ಸಾವಿರ ರು. ದಂಡ, ಕಲಂ 354  (ಎ) ಐಪಿಸಿ ಮತ್ತು ಕಲಂ ೧೦ರ ಪೋಕ್ಸೋ ಕಾಯಿದೆ ಅಪರಾಧಕ್ಕೆ 5 ವರ್ಷಗಳ ಕಠಿಣ ಶಿಕ್ಷೆ ಮತ್ತು 5 ಸಾವಿರ ರು. ದಂಡ, ನೊಂದ ಬಾಲಕಿಗೆ 50೦ ಸಾವಿರ ರು. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಎಂ.ಜೆ.ಪೂರ್ಣಿಮಾ ವಾದ ಮಂಡಿಸಿದ್ದರು.