ಬೈಕ್ ಡಿಕ್ಕಿಯಾಗಿ ಯುವತಿ ಮೃತ- ಫೆ.18 ರಂದು ಹಸೆಮಣೆ ಏರಬೇಕಾಗಿದ್ದ ಶರಣ್ಯ ಮಸಣಕ್ಕೆ

| Published : Jan 19 2025, 02:15 AM IST / Updated: Jan 19 2025, 08:40 AM IST

deadbody

ಸಾರಾಂಶ

ಬೈಕ್ ಡಿಕ್ಕಿಯಾಗಿ ಯುವತಿ ಮೃತಪಟ್ಟಿರುವ ಘಟನೆ ಎಚ್.ಬಸಾಪುರ ಗ್ರಾಮದ ಗೇಟ್ ಬಳಿ ಶನಿವಾರ ಬೆಳಗ್ಗೆ ನಡೆದಿದೆ. ಲತಃ ಬಾಳೆ ಹೊನ್ನಿಗ ಗ್ರಾಮದ ಕೃಷ್ಣೇಗೌಡರ ಪುತ್ರಿ ಬಿ.ಕೆ.ಶರಣ್ಯ (26) ಫೆಬ್ರವರಿ 18ರಂದು ಹಸೆಮಣೆ ಹೇರಬೇಕಾಗಿದ್ದು, ಅಪಘಾತದಲ್ಲಿ ಮೃತಪಟ್ಟು ಮಸಣ ಸೇರಿದ್ದಾರೆ.

 ಹಲಗೂರು : ಬೈಕ್ ಡಿಕ್ಕಿಯಾಗಿ ಯುವತಿ ಮೃತಪಟ್ಟಿರುವ ಘಟನೆ ಎಚ್.ಬಸಾಪುರ ಗ್ರಾಮದ ಗೇಟ್ ಬಳಿ ಶನಿವಾರ ಬೆಳಗ್ಗೆ ನಡೆದಿದೆ.

ಮೂಲತಃ ಬಾಳೆ ಹೊನ್ನಿಗ ಗ್ರಾಮದ ಕೃಷ್ಣೇಗೌಡರ ಪುತ್ರಿ ಬಿ.ಕೆ.ಶರಣ್ಯ (26) ಫೆಬ್ರವರಿ 18ರಂದು ಹಸೆಮಣೆ ಏರಬೇಕಾಗಿದ್ದು, ಅಪಘಾತದಲ್ಲಿ ಮೃತಪಟ್ಟು ಮಸಣ ಸೇರಿದ್ದಾರೆ.

ಕಾರ್ಯನಿಮಿತಗಿ ಹಲಗೂರಿಗೆ ತಮ್ಮ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೇಳೆ ಮಳವಳ್ಳಿ ಕಡೆಯಿಂದ ಅತಿ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಶರಣ್ಯ ಮೃತಪಟ್ಟಿರುತ್ತಾರೆ. ಮುಂದಿನ ದಿನಗಳಲ್ಲಿ ಮದುವೆಯಾಗಬೇಕಿದ್ದ ಯುವತಿ ಮಸಣಕ್ಕೆ ಸೇರುವುದು ದುರಾದೃಷ್ಟವಾಗಿದೆ. ಘಟನೆ ನಡೆದ ಸ್ಥಳದಲ್ಲಿ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿತ್ತು.

ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ಮುಂದಿನ ತನಿಖೆ ಕೈಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.

ಮಂಚೇಗೌಡ ನಿಧನ

ಕೆ.ಎಂ.ದೊಡ್ಡಿ: ಸಮೀಪದ ದೊಡ್ಡರಸಿನಕೆರೆ ಗ್ರಾಮದ ಗ್ರಾಮ‌ ಪಂಚಾಯಿತಿ‌ ಮತ್ತು ಸೊಸೈಟಿ ಮಾಜಿ ಅಧ್ಯಕ್ಷ ಡಿ.ಎಂ. ಮಂಚೇಗೌಡ ಅಪಘಾತದಿಂದ ಶನಿವಾರ ರಾತ್ರಿ‌ ಮೃತಪಟ್ಟರು. ಮೃತರಿಗೆ ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ.

ಮೃತರ ಅಂತ್ಯಕ್ರಿಯೆ ಜ.19 ರಂದು ಭಾನುವಾರ ಜರುಗಲಿದೆ‌ ಎಂದು ಕುಟುಂಬ ಮೂಲಗಳು ತಿಳಿಸಿವೆ.