ಸಾರಾಂಶ
ಖಾಸಗಿ ಶಾಲಾ ವಾಹನಗಳ ಬಳಿಕ ನೀರಿನ ಟ್ಯಾಂಕರ್‌ಗಳಿಗೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದು, ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರ ಕಾನೂನು ಉಲ್ಲಂಘಿಸಿದ ನೀರಿನ ಟ್ಯಾಂಕರ್‌ಗಳ ಮೇಲೆ 595 ಪ್ರಕರಣ ದಾಖಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಖಾಸಗಿ ಶಾಲಾ ವಾಹನಗಳ ಬಳಿಕ ನೀರಿನ ಟ್ಯಾಂಕರ್‌ಗಳಿಗೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದು, ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರ ಕಾನೂನು ಉಲ್ಲಂಘಿಸಿದ ನೀರಿನ ಟ್ಯಾಂಕರ್‌ಗಳ ಮೇಲೆ 595 ಪ್ರಕರಣ ದಾಖಲಿಸಿದ್ದಾರೆ.ನಗರದ ಎಲ್ಲ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಬೆಳಗ್ಗೆ ಈ ವಿಶೇಷ ಕಾರ್ಯಾಚರಣೆ ನಡೆದಿದ್ದು, ಟ್ಯಾಂಕರ್‌ಗಳ ಮೇಲೆ 595 ಪ್ರಕರಣ ದಾಖಲಿಸಿ 3,33,500 ರು ದಂಡವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಕೆಲ ದಿನಗಳ ಹಿಂದೆ ಖಾಸಗಿ ಶಾಲಾ ವಾಹನಗಳ ವಿರುದ್ಧ ಸಹ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಕೇಸ್ ಹಾಗೂ ದಂಡದ ವಿವರ ಉಲ್ಲಂಘನೆಪ್ರಕರಣದಂಡ (₹)ಸಮವಸ್ತ್ರ ಧರಿಸದಿರುವುದು2521,26,000ಸೀಟ್ ಬೆಲ್ಟ್ ಹಾಕದಿರುವುದು402000ನೋ ಎಂಟ್ರಿ13467000ದೋಷಪೂರಿತ ಸಂಖ್ಯಾ ಫಲಕ 4824000ಪಥ ಶಿಸ್ತು ಉಲ್ಲಂಘನೆ 63000
ನಿಲುಗಡೆ ನಿಷೇಧ6464000ಪುಟ್‌ಪಾತ್ ಪಾರ್ಕಿಂಗ್44000
ಕರ್ಕಶ ಹಾರ್ನ್ 136500ಪಾನಮತ್ತ ಚಾಲನೆ 1 ಕೋರ್ಟ್‌ನಲ್ಲಿ ದಂಡ ಇತರೆ ಪ್ರಕರಣ3319000ಒಟ್ಟು 5953,33,500