‘ಆ ನಟಿ ನನ್ನಂತೆಯೇ ಇನ್ನೂ ಮೂವರಿಗೆ ವಂಚನೆ ಮಾಡಿದ್ದಾರೆ. ಆ ಮೂವರು ನನ್ನ ಸಂಪರ್ಕಕ್ಕೆ ಬಂದಿದ್ದಾರೆ’ ಎಂದು ಉದ್ಯಮಿ ಹಾಗೂ ಸಿನಿಮಾ ನಿರ್ಮಾಪಕ ಅರವಿಂದ್ ವೆಂಕಟೇಶ್ ಅವರು ತನ್ನ ವಿರುದ್ಧ ದೂರು ನೀಡಿದ ನಟಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು : ‘ಆ ನಟಿ ನನ್ನಂತೆಯೇ ಇನ್ನೂ ಮೂವರಿಗೆ ವಂಚನೆ ಮಾಡಿದ್ದಾರೆ. ಆ ಮೂವರು ನನ್ನ ಸಂಪರ್ಕಕ್ಕೆ ಬಂದಿದ್ದಾರೆ’ ಎಂದು ಉದ್ಯಮಿ ಹಾಗೂ ಸಿನಿಮಾ ನಿರ್ಮಾಪಕ ಅರವಿಂದ್ ವೆಂಕಟೇಶ್ ಅವರು ತನ್ನ ವಿರುದ್ಧ ದೂರು ನೀಡಿದ ನಟಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಸ್ಯಾಂಡಲ್‌ವುಡ್ ನಟಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆಂಬ ತಮ್ಮ ಮೇಲಿನ ಆರೋಪಗಳ ಬಗ್ಗೆ ಮಾತನಾಡಿದ ಅರವಿಂದ್ ವೆಂಕಟೇಶ್ ರೆಡ್ಡಿ, ‘ನಾನು ಯಾರಿಗೂ ಲೈಂಗಿಕ ಕಿರುಕುಳ ನೀಡಿಲ್ಲ. ಯಾರನ್ನೂ ಹಿಂಬಾಲಿಸಿಯೂ ಇಲ್ಲ. ಆದರೆ, ನನ್ನ ಮೇಲೆ ಸುಳ್ಳು ಆರೋಪ ಮಾಡಿ ಬೀದಿಯಲ್ಲಿ ನಿಲ್ಲಿಸಿದ್ದಾರೆ. ನಾನೂ ಗೌರವಸ್ಥ ಕುಟುಂಬದಲ್ಲಿ ಹುಟ್ಟಿದವನು. ನನಗೆ ಮರ್ಯಾದೆ ಇದೆ. ಆಕೆ ಕಿರುಕುಳ ಅಂತ ನೀಡಿರುವ ದೂರನ್ನು ಮಾಧ್ಯಮಗಳು ‘ಲೈಂಗಿಕ ಕಿರುಕುಳ’ ಅಂತ ಬಿಂಬಿಸುತ್ತಿದ್ದಾರೆ’ ಎಂದು ಬೇಸರ ತೋಡಿಕೊಂಡರು.
ಇನ್ನೂ ಮೂವರಿಗೆ ಇದೇ ರೀತಿ ಮೋಸ
‘ಆಕೆ ನನಗೆ ಮಾತ್ರವಲ್ಲ, ಮದುವೆ ಹೆಸರಿನಲ್ಲಿ ಇನ್ನೂ ಮೂವರಿಗೆ ಇದೇ ರೀತಿ ಮೋಸ ಮಾಡಿದ್ದಾರೆ. ಈಗ ಆ ಮೂವರು ನನ್ನನ್ನು ಸಂಪರ್ಕಿಸಿದ್ದಾರೆ. ಅವರಿಗೂ ಮದುವೆ ಆಗುತ್ತೇನೆ ಎಂದು ಹೇಳಿ ವಂಚನೆ ಮಾಡಿದ್ದಾಳೆಂದು ತಿಳಿದು ಬಂದಿದೆ. ಕೆಲವರ ಬಳಿ 80, 90 ಲಕ್ಷ ಹಣ ತೆಗೆದುಕೊಂಡು ಮೋಸ ಮಾಡಿದ್ದಾರೆ. ಹಣ ವಾಪಸ್ ಕೇಳಿದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರಂತೆ. ಆಕೆಯಿಂದ ಮೋಸ ಹೋದವರ ಪೈಕಿ ಒಬ್ಬರಿಗೆ ಈಗ ನಿಶ್ಚಿತಾರ್ಥ ಆಗಿದೆ. ಅವರು ಬೆಂಗಳೂರಿನವರೇ. ಮತ್ತೊಬ್ಬರು ಅಮೆರಿಕದಲ್ಲಿದ್ದಾರೆ. ನಾನೂ ಕಾರು, ಸೈಟು ಬಿಟ್ಟು ಆ ನಟಿಗೆ 2 ರಿಂದ 2.5 ಕೋಟಿ ಖರ್ಚು ಮಾಡಿದ್ದೇನೆ. ಎಲ್ಲಾ ಸೇರಿದರೆ 3.25ರಿಂದ 3.5 ಕೋಟಿ ನಾನು ಆ ನಟಿಗೆ ಖರ್ಚು ಮಾಡಿದ್ದೇನೆ’ ಎಂದು ಹೇಳಿದರು.
ಲೈಂ*ಕ ಕಿರುಕುಳ ಕೊಟ್ಟಿದ್ದೇನೆ ಎನ್ನುವುದಕ್ಕೆ ಸ್ಪಷ್ಟನೆ
‘ಈಗ ನಾನು ಮಾಧ್ಯಮಗಳ ಮುಂದೆ ಬರಲು ಕಾರಣ ನಾನು ಆಕೆಗೆ ಲೈಂ*ಕ ಕಿರುಕುಳ ಕೊಟ್ಟಿದ್ದೇನೆ ಎನ್ನುವುದಕ್ಕೆ ಸ್ಪಷ್ಟನೆ ಕೊಡಲು. ನನಗೆ ಆ ನಟಿ ಪರಿಚಯ ಆಗಿದ್ದು 2017ರಲ್ಲಿ. ನಾವಿಬ್ಬರು ಜೊತೆಗೆ ಇದ್ವಿ. 2023ರ ಜೂನ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಆಗುವುದಕ್ಕೂ ಪ್ಲಾನ್ ಮಾಡಿಕೊಂಡಿದ್ದೆವು. ಆದರೆ, ಅದು ಸಾಧ್ಯವಾಗದೆ ಇಬ್ಬರೂ ದೂರ ಆದೆವು. ನಾನು ಎರಡು ವರ್ಷಗಳಿಂದ ಆಕೆ ಜೊತೆಗೆ ಇರಲಿಲ್ಲ. ಆದರೆ, ನನ್ನ ಮೇಲೆ ಈಗ ದೂರು ಕೊಟ್ಟು ಎಫ್‌ಐಆರ್ ಹಾಕಿಸಿದ್ದಾರೆ ಎಂದು ಅರವಿಂದ್ ವೆಂಕಟೇಶ್ ಹೇಳಿದರು.

