ಮದುವೆಗೂ ಮುಕ್ತಾಯದ ದಿನಾಂಕವನ್ನು ನಿಗದಿಪಡಿಸಬೇಕು ಮತ್ತು ನವೀಕರಣದ ಆಯ್ಕೆಯನ್ನೂ ನೀಡಬೇಕು’ ಎಂದು ಬಾಲಿವುಡ್‌ ಹಿರಿಯ ನಟಿ ಕಾಜೋಲ್‌ ಹೇಳಿಕೆ ನೀಡಿದ್ದಾರೆ. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ನವದೆಹಲಿ: ‘ಮದುವೆಗೂ ಮುಕ್ತಾಯದ ದಿನಾಂಕವನ್ನು ನಿಗದಿಪಡಿಸಬೇಕು ಮತ್ತು ನವೀಕರಣದ ಆಯ್ಕೆಯನ್ನೂ ನೀಡಬೇಕು’ ಎಂದು ಬಾಲಿವುಡ್‌ ಹಿರಿಯ ನಟಿ ಕಾಜೋಲ್‌ ಹೇಳಿಕೆ ನೀಡಿದ್ದಾರೆ. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ನವೀಕರಣ ಆಯ್ಕೆ ಇರಬೇಕೇ ಎಂಬ ಕುರಿತ ಚರ್ಚೆ

‘ಟೂ ಮಚ್ ವಿತ್‌ ಕಾಜೋಲ್ ಆ್ಯಂಡ್‌ ಟ್ವಿಂಕಲ್’ ಎಂಬ ಟೀವಿ ಕಾರ್ಯಕ್ರಮ ನಡೆಸಿಕೊಡುವ ಕಾಜೋಲ್‌ ಕಾರ್ಯಕ್ರಮದಲ್ಲಿ ‘ಮದುವೆಗೆ ಮುಕ್ತಾಯ ದಿನಾಂಕ ಮತ್ತು ನವೀಕರಣ ಆಯ್ಕೆ ಇರಬೇಕೇ?’ ಎಂಬ ಕುರಿತ ಚರ್ಚೆಯಲ್ಲಿ ಭಾಗಿಯಾಗಿ, ‘ನನಗೆ ಖಂಡಿತ ಹಾಗೆ ಅನಿಸುತ್ತದೆ. ನೀವು ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಯನ್ನೇ ಮದುವೆಯಾಗುತ್ತೀರಿ ಎಂದು ಯಾವ ಖಾತರಿಯಿದೆ? ನವೀಕರಣ ಆಯ್ಕೆಯು ಅರ್ಥಪೂರ್ಣವಾಗಿರುತ್ತದೆ. ಸಂಬಂಧದ ಅವಧಿ ಮುಗಿದಿದ್ದರೆ, ಯಾರೂ ಹೆಚ್ಚು ಕಾಲ ಬಳಲಬೇಕಾಗಿಲ್ಲ’ ಎಂದಿದ್ದಾರೆ. ಅವರ ಈ ಹೇಳಿಕೆಗೆ ನಾನಾ ರೀತಿಯ ಟೀಕೆಗಳು ಕೇಳಿಬರುತ್ತಿವೆ.

ದಾಂಪತ್ಯದಲ್ಲಿ ದೈಹಿಕ ವಂಚನೆ ತಪ್ಪಲ್ಲ

ಈ ಹಿಂದೆ ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ಅಕ್ಷಯ್‌ ಕುಮಾರ್‌ ಪತ್ನಿ ಟ್ವಿಂಕಲ್‌ ಖನ್ನಾ, ‘ದಾಂಪತ್ಯದಲ್ಲಿ ದೈಹಿಕ ವಂಚನೆ ತಪ್ಪು ಎಂದು ನನಗೆ ಎನಿಸುವುದಿಲ್ಲ’ ಎಂದಿದ್ದರು. ಇದು ಟೀಕೆಗೆ ಕಾರಣವಾಗಿತ್ತು.