ತಾನು ಕೆಲಸಕ್ಕಿದ್ದ ಕಂಪನಿಯಲ್ಲೇ ಕ್ರಿಪ್ಟೋ ಕರೆನ್ಸಿ ವ್ಯಾಲೆಟ್‌ಗೆ ಕನ್ನ : ಕೋಟ್ಯಂತರ ಮೌಲ್ಯದ ಕ್ರಿಪ್ಟೋ ಕರೆನ್ಸಿ ಕಳವು

| Published : Sep 11 2024, 01:01 AM IST / Updated: Sep 11 2024, 05:13 AM IST

Bhopal museum theft
ತಾನು ಕೆಲಸಕ್ಕಿದ್ದ ಕಂಪನಿಯಲ್ಲೇ ಕ್ರಿಪ್ಟೋ ಕರೆನ್ಸಿ ವ್ಯಾಲೆಟ್‌ಗೆ ಕನ್ನ : ಕೋಟ್ಯಂತರ ಮೌಲ್ಯದ ಕ್ರಿಪ್ಟೋ ಕರೆನ್ಸಿ ಕಳವು
Share this Article
  • FB
  • TW
  • Linkdin
  • Email

ಸಾರಾಂಶ

ತಾನು ಕೆಲಸಕ್ಕಿದ್ದ ಕಂಪನಿಯಲ್ಲೇ ಕ್ರಿಪ್ಟೋ ಕರೆನ್ಸಿ ವ್ಯಾಲೆಟ್‌ಗೆ ಕನ್ನ ಹಾಕಿ ಕೋಟ್ಯಂತರ ಮೌಲ್ಯದ ಕ್ರಿಪ್ಟೋ ಕರೆನ್ಸಿ ಕಳವು ಮಾಡಿರುವ ಆರೋಪಿಯನ್ನು ಬಂಧಿಸಲಾಗಿದೆ.

  ಬೆಂಗಳೂರು : ತನ್ನ ಕಂಪನಿಯ ಕ್ರಿಪ್ಟೋ ಕರೆನ್ಸಿ ವ್ಯಾಲೆಟ್‌ಗೆ ಕನ್ನ ಹಾಕಿ ಕೋಟ್ಯಂತರ ಮೌಲ್ಯದ ಕ್ರಿಪ್ಟೋ ಕರೆನ್ಸಿ ಕಳವು ಮಾಡಿದ್ದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬನನ್ನು ಸಿಐಡಿ ಸೈಬರ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣದ ಶುಭಾಂಗ್ ಜೈನ್ ಬಂಧಿತನಾಗಿದ್ದು, ಆರೋಪಿಯಿಂದ ಎರಡು ಮೊಬೈಲ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಸೈಫರ್ ಟೆಕ್ನಾಲಜಿಸ್‌ ಪ್ರೈವೇಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಆ ಕಂಪನಿಯ ಉಪಯೋಗಕ್ಕೆ ತೆರೆಯಲಾಗಿದ್ದ ಕ್ರಿಪ್ಟೋ ವ್ಯಾಲೆಟ್‌ಗೆ ಕನ್ನ ಹಾಕಿ ಹಣ ದೋಚಿದ್ದ. ಈ ಬಗ್ಗೆ ಕಂಪನಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕೃತ್ಯ ಬಯಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮುಂಬೈನಲ್ಲಿ ಪತ್ತೆ ಹಚ್ಚಿ ಸಿಐಡಿ ಸೈಬರ್ ವಿಭಾಗದ ಡಿಟೆಕ್ಟಿವ್‌ ಇನ್‌ಸ್ಪೆಕ್ಟರ್‌ ಶಿವಪ್ರಕಾಶ್ ನೇತೃತ್ವದ ತಂಡ ಕರೆತಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

₹8-10 ಕೋಟಿ ಮೌಲ್ಯದ ಬಿಟ್‌ ಕಾಯಿನ್:

ಕೆಲ ತಿಂಗಳಿಂದ ಸೈಫರ್ ಟೆಕ್ನಾಲಜಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಹರಿಯಾಣದ ಜೈನ್‌, ಕೊರೋನಾ ಬಳಿಕ ಆತ ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಕಂಪನಿಯ ಕ್ರಿಫ್ಟೋ ಕರೆನ್ಸಿ ವ್ಯಾಲೆಟ್‌ಗೆ ಕನ್ನ ಹಾಕಿದ ಆತ ಕ್ರಿಫೋ ಕರೆನ್ಸಿಯನ್ನು ತಮ್ಮ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರ ಖಾತೆಗಳಿಗೆ ವರ್ಗಾಯಿಸಿ ನಗದು ಮಾಡಿಕೊಂಡಿದ್ದ. ಈ ವ್ಯಾಲೆಟ್‌ ಕನ್ನ ಬಗ್ಗೆ ಮಾಹಿತಿ ಪಡೆದ ಸೈಫರ್ ಟೆಕ್ನಾಲಜಿಸ್ ಕಂಪನಿಯ ಅಧಿಕಾರಿಗಳು, ಕ್ರಿಪ್ಟೋ ಕೆರನ್ಸಿ ವರ್ಗಾವಣೆ ಕುರಿತು ಪರಿಶೀಲಿಸಿದಾಗ ಜೈನ್ ಭಾನಗಡಿ ಪತ್ತೆಯಾಗಿದೆ.

ಈ ಬಗ್ಗೆ ಸುಬ್ರಹ್ಮಣ್ಯ ನಗರ ಠಾಣೆಗೆ ಕಂಪನಿ ಅಧಿಕಾರಿಗಳು ದೂರು ಸಲ್ಲಿಸಿದ್ದರು. ಬಹುಕೋಟಿ ಮೌಲ್ಯದ ವಂಚನೆ ಪ್ರಕರಣವಾಗಿದ್ದರಿಂದ ಸಿಐಡಿ ತನಿಖೆಗೆ ಕ್ರಿಫ್ಟೋ ಕರೆನ್ಸಿ ಕಳವು ಕೃತ್ಯ ವರ್ಗಾವಣೆಯಾಯಿತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಮುಂಬೈನಲ್ಲಿ ಬಂಧಿಸಿದ್ದಾರೆ. ತನಿಖೆಯಲ್ಲಿ ಸುಮಾರು 8 ರಿಂದ 10 ಕೋಟಿ ರು ಮೌಲ್ಯದ ಕ್ರಿಫ್ಟೋ ಕೆರನ್ಸಿ ಕಳವು ಮಾಡಿರುವುದು ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.