ಬೈಕ್‌ಗೆ ಟಿಪ್ಪರ್‌ ಡಿಕ್ಕಿ: ಯುವಕ ಸಾವು, ಮತ್ತೊಬ್ಬನಿಗೆ ಗಾಯ

| Published : Mar 26 2024, 01:20 AM IST

ಬೈಕ್‌ಗೆ ಟಿಪ್ಪರ್‌ ಡಿಕ್ಕಿ: ಯುವಕ ಸಾವು, ಮತ್ತೊಬ್ಬನಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ನೆಲಮಾಕನಹಳ್ಳಿ ಪುಟ್ಟಸ್ವಾಮಿ ಪುತ್ರ ಯಶ್ವಂತ್ ತಮ್ಮ ವಸಂತ್ ಗಾಯಗೊಂಡಿದ್ದಾನೆ. ಹಂದಿಗಳಿಗೆ ಬೂಸ ತೆಗೆದುಕೊಂಡು ಮಳವಳ್ಳಿಯಿಂದ ನೆಲಮಾಕನಹಳ್ಳಿಗೆ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಟಿಪ್ಪರ್‌ನನೊಳಗೆ ನುಗ್ಗಿದೆ. ಬೈಕ್‌ನಲ್ಲಿದ್ದ ಇಬ್ಬರಿಗೂ ತೀವ್ರ ಗಾಯಗೊಂಡಿದ್ದಾರೆ. ಸ್ಥಳಲ್ಲಿಯೇ ಇದ್ದ ಸಾರ್ವಜನಿಕರು ಇಬ್ಬರನ್ನು ತಾಲೂಕು ಆಸ್ಪತ್ರೆಗೆ ಕರೆತರುತ್ತಿದ್ದಾಗ ಯಶ್ವಂತ್ ಸಾವನ್ನಪ್ಪಿದ್ದಾನೆ.

ಕನ್ನಡಪ್ರಭ ವಾರ್ತೆ ಮಳವಳ್ಳಿಟಿಪ್ಪರ್‌ ಬೈಕ್‌ಗೆ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿ, ಮತ್ತೊಬ್ಬ ಗಾಯಗೊಂಡಿರುವ ಘಟನೆ ಪಟ್ಟಣದ ಅನಂತ್‌ರಾಂ ವೃತ್ತದಲ್ಲಿ ನಡೆದಿದೆ.

ತಾಲೂಕಿನ ನೆಲಮಾಕನಹಳ್ಳಿ ಪುಟ್ಟಸ್ವಾಮಿ ಪುತ್ರ ಯಶ್ವಂತ್ (20) ಸಾವನ್ನಪ್ಪಿದ ದುರ್ದೈವಿ. ಮೃತರ ತಮ್ಮ ವಸಂತ್ (17) ಗಾಯಗೊಂಡಿದ್ದಾನೆ. ಹಂದಿಗಳಿಗೆ ಬೂಸ ತೆಗೆದುಕೊಂಡು ಮಳವಳ್ಳಿಯಿಂದ ನೆಲಮಾಕನಹಳ್ಳಿಗೆ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಟಿಪ್ಪರ್‌ನನೊಳಗೆ ನುಗ್ಗಿದೆ.

ಬೈಕ್‌ನಲ್ಲಿದ್ದ ಇಬ್ಬರಿಗೂ ತೀವ್ರ ಗಾಯಗೊಂಡಿದ್ದಾರೆ. ಸ್ಥಳಲ್ಲಿಯೇ ಇದ್ದ ಸಾರ್ವಜನಿಕರು ಇಬ್ಬರನ್ನು ತಾಲೂಕು ಆಸ್ಪತ್ರೆಗೆ ಕರೆತರುತ್ತಿದ್ದಾಗ ಯಶ್ವಂತ್ ಸಾವನ್ನಪ್ಪಿದ್ದಾನೆ. ಗಾಯಳು ವಸಂತ್‌ಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾರು ಡಿಕ್ಕಿ: ಬೈಕ್ ಸವಾರ ಸಾವುಮದ್ದೂರು:ಕಾರು ಬೈಕ್‌ಗೆ ಡಿಕ್ಕಿಯಾಗಿ ಟೈಲರ್ ಮೃತಪಟ್ಟಿರುವ ಘಟನೆ ಪಟ್ಟಣದ ಶಿವಪುರ ಹಳೇ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸೋಮವಾರ ಜರುಗಿದೆ.ಪಟ್ಟಣದ ಲೀಲಾವತಿ ಬಡಾವಣೆಯ 2ನೇ ಕ್ರಾಸ್ ನಿವಾಸಿ ನಾರಾಯಣರಾವ್ (67) ಮೃತಪಟ್ಟ ವ್ಯಕ್ತಿ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಈತ ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಮಂಡ್ಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ.ಟೈಲರ್ ನಾರಾಯಣರಾವ್ ಅವರು ತಮ್ಮ ಮಗನನ್ನು ಮದ್ದೂರು ರೈಲ್ವೆ ನಿಲ್ದಾಣಕ್ಕೆ ಬಿಟ್ಟು ವಾಪಸ್ ಬರುತ್ತಿದ್ದಾಗ ಶಿವಪುರದ ಧ್ವಜ ಸತ್ಯಾಗ್ರಹ ಸೌಧದ ಬಳಿ ಹಿಂದಿನಿಂದ ಬಂದ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.