ಬೆಂಗಳೂರು: ಏಲ್ಲೆಂದ್ರಲ್ಲಿ ನಿಮ್ಮ ವಾಹನ ನಿಲ್ಸಿದ್ರೆ ಎಚ್ಚರ

| Published : Apr 18 2024, 02:20 AM IST / Updated: Apr 18 2024, 05:27 AM IST

ಸಾರಾಂಶ

ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿ ನಿಲ್ಲುವ ವಾಹನಗಳ ತೆರವಿಗೆ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದು, 1412 ವಾಹನಗಳ ತೆರವಿಗೆ ಮುಂದಾಗಿದ್ದಾರೆ.

 ಬೆಂಗಳೂರು :  ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿ ನಿಲ್ಲುವ ವಾಹನಗಳ ತೆರವಿಗೆ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದು, 1412 ವಾಹನಗಳ ತೆರವಿಗೆ ಮುಂದಾಗಿದ್ದಾರೆ.

ಈ ವಾಹನಗಳ ಮಾಲಿಕರಿಗೆ ‘ದಂಡ’ ವಿಧಿಸುವುದಲ್ಲದೆ ಆ ವಾಹನಗಳ ಜಪ್ತಿ ಮಾಡಿ ಚುರುಕು ಮುಟ್ಟಿಸಲು ಪೊಲೀಸರು ನಿರ್ಧರಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸಿ ಹೋಗುವ ಮುನ್ನ ನಾಗರಿಕರು ಜಾಗೃತರಾಬೇಕಿದೆ.

ನಗರದ 50 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಂತಹ ವಾಹನಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದೆ. ಈಗಾಗಲೇ 1412 ವಾಹನಗಳನ್ನು ಗುರುತಿಸಲಾಗಿದೆ. ಇದರಲ್ಲಿ 521 ಬೈಕ್, 706 ಆಟೋ, 79 ಕಾರುಗಳು, 6 ಭಾರಿ ವಾಹನಗಳು ಹಾಗೂ 93 ಲಘು ಸರಕು ಸಾಗಣೆ ವಾಹನಗಳಿವೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್ ಹೇಳಿದ್ದಾರೆ.

ಈ ವಾಹನಗಳ ಮಾಲಿಕರಿಗೆ ನೋಟಿಸ್ ನೀಡಿ ದಂಡ ಸಂಗ್ರಹಿಸಲಾಗುತ್ತದೆ. ನಂತರ 918 ವಾಹನಗಳನ್ನು ತೆರವು ಮಾಡಲಾಗುವುದು. ಇನ್ನುಳಿದ 494 ವಾಹನಗಳಿಗೆ ಮಾಲಿಕರು ಪತ್ತೆಯಾಗಿಲ್ಲ. ಈ ವಾಹನಗಳನ್ನು ನ್ಯಾಯಾಲಯದ ಅನುಮತಿ ಪಡೆದು ಸಾರ್ವಜನಿಕ ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.